Nata seized | ಶಿವಮೊಗ್ಗದಲ್ಲಿ ಅಪರೂಪದ ಕರಿ‌ಮರ ನಾಟಾ ಸೀಜ್, ಕರ್ನಾಟಕದಲ್ಲೇ‌ ಇದು ಮೊದಲ ಕೇಸ್

Forest Tree

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಟೊಮ್ಯಾಟೋ ಟ್ರೇ ಅಡಿಯಲ್ಲಿಟ್ಟು ಶೆಡ್ಯೂಲ್ 1ರಡಿ ಬರುವ ಅಪರೂಪದ ಕರಿಮರದ ನಾಟಾಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ ಲಕ್ಷಾಂತರ ಮೌಲ್ಯದ ನಾಟಾಗಳನ್ನು ಸೀಜ್ ಮಾಡಿದ್ದು, ಆರೋಪಿಯನ್ನು ಅರಣ್ಯ ಇಲಾಖೆ‌‌ ಸಿಬ್ಬಂದಿ ಬಂಧಿಸಿದ್ದಾರೆ.

READ | ಶಿಕಾರಿಪುರ ಶಾಸಕ‌ ವಿಜಯೇಂದ್ರಗೆ ದೀಪಾವಳಿ ಗಿಫ್ಟ್ ನೀಡಿದ ಬಿಜೆಪಿ ಹೈಕಮಾಂಡ್, ವಿಜಯೇಂದ್ರ ರಾಜಕೀಯ ಜೀವನದ ಹೈಲೈಟ್ಸ್ ಇಲ್ಲಿದೆ

ಹೊಳೆಹೊನ್ನೂರು ರಸ್ತೆಯಲ್ಲಿ ಬೊಲೆರೋ‌ ಪಿಕ್ ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಬೀಟೆ ಮತ್ತು ಕರಿಮರದ ನಾಟಾಗಳಿರುವುದು ಗಮನಕ್ಕೆ‌ ಬಂದಿದೆ. ಕರಿ ಮರ ನಾಟಾ ಸಿಕ್ಕಿರುವುದು ರಾಜ್ಯದಲ್ಲೇ ಮೊದಲನೇ‌ ಪ್ರಕರಣವಾಗಿರುವುದರಿಂದ ಇದರ ಅಂದಾಜು ಮೌಲ್ಯವನ್ನು ಲೆಕ್ಕ ಹಾಕಲಾಗುತ್ತಿದೆ. ಆದರೆ,‌ ಅಂದಾಜು ಲಕ್ಷಾಂತರ ಮೌಲ್ಯಕ್ಕಿಂತ‌ ಕಡಿಮೆ ಇಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
32 ನಾಟಾ ತುಂಡುಗಳು ಪತ್ತೆ
ಡಯಸ್ಪೋರಸ್‌ ಎಬಿನಂ (diasporus ebenum) ಪ್ರಭೇದಕ್ಕೆ‌ ಸೇರುವ ಕರಿ ಮರ ಅಪಾಯದಂಚಿನಲ್ಲಿರುವುದರಿಂದ ಕಡಿತಲೆ‌ ಮಾಡುವುದು ಅಪರಾಧವಾಗಿದೆ. ನಾಟಾಗಳ ಸಾಗಣೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಒಟ್ಟು 32 ನಾಟಾ ತುಂಡುಗಳನ್ನು ಸೀಜ್ ಮಾಡಿದ್ದು, ಅವುಗಳನ್ನು ಯಾರಿಂದ ಯಾರಿಗೆ ಪೂರೈಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಶಂಕರ ವಲಯದ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು.

error: Content is protected !!