ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಎನ್.ಇ.ಎಸ್ ಮೈದಾನದಲ್ಲಿ ಜನವರಿ 10ರಂದು ಆಯೋಜಿಸಲಾಗಿರುವ 2ನೇ ವರ್ಷದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ದೇಸಿ ತಳಿ ಮುಧೋಳಕ್ಕೆ ಉಚಿತ ಪ್ರವೇಶವಿದೆ.
ಇದನ್ನೂ ಓದಿ | ಜನವರಿ 10ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಶ್ವಾನ, ಬೆಕ್ಕು ಪ್ರದರ್ಶನ, ಕಂಪ್ಲೀಟ್ ಮಾಹಿತಿ ಇಲ್ಲಿದೆ
ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ನಿಂದ ಶ್ವಾನ, ಬೆಕ್ಕು ಪ್ರದರ್ಶನ ಆಯೋಜಿಸಿದ್ದು, ಈಗಾಗಲೇ 150ಕ್ಕೂ ಅಧಿಕ ನೋಂದಣಿಗಳಾಗಿವೆ ಎಂದು ಕ್ಲಬ್ ಅಧ್ಯಕ್ಷ ಪ್ರೀತಮ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7676441122, 9964289695, 7892685676ರಲ್ಲಿ ಸಂಪರ್ಕಿಸಬಹುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಉಲ್ಲಾಸ್, ಜಿ.ಎಸ್.ಪ್ರಸಾದ್, ಮನೋಹರ್, ಸಂಜು, ಸಮೀಕ್ಷಾ ಇತರರಿದ್ದರು.