sakrebyle elephant camp | ಸಕ್ರೆಬೈಲು ಬಿಡಾರದಲ್ಲಿ ಆನೆಯಿಂದ ಬಿದ್ದ ಮಾವುತ, ಹೇಗೆ ನಡೀತು ಘಟನೆ?

Kunti Elephant

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಕ್ರೆಬೈಲು ಆನೆಬಿಡಾರದಲ್ಲಿ ಮಾವುತನೊಬ್ಬ ಆನೆಯಿಂದ ಕೆಳಗೆ ಬಿದ್ದ ಘಟನೆ ಶನಿವಾರ ಸಂಭವಿಸಿದೆ.
ಮಾವುತ ಶಂಶುದ್ದೀನ್ ಎಂಬಾತ ಕುಂತಿ ಆನೆಯ ಮೇಲೆ ಕುಳಿತುಕೊಂಡಾಗ ಕೆಳಗೆ ಬಿದ್ದಿದ್ದು, ಕೈ ಮುರಿದಿದೆ. ತಲೆಗೂ ಗಾಯವಾಗಿದೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ನಡೆದಿದ್ದು ಹೇಗೆ?
ಸಕ್ರೆಬೈಲು ಆನೆಬಿಡಾರದಲ್ಲಿ ಮಾವುತ ಶಂಶುದ್ದೀನ್ ಕುಂತಿ ಆನೆಯ ಮೇಲೆ ಕುಳಿತುಕೊಂಡು ಮುಂದೆ ಸಾಗುತ್ತಿದ್ದ. ಆಗ ಹಿಂದಿನಿಂದ ಅದರ ಮರಿ ಓಡಿಕೊಂಡು ಬಂದಿದ್ದು, ಕುಂತಿಯು ತಕ್ಷಣ ಹಿಂದಕ್ಕೆ ತಿರುಗಿದೆ. ಆಗ ಮಾವುತೆ ಕೆಳಗೆ ಬಿದ್ದಿದ್ದಾನೆ. ಆನೆಯಿಂದ ಬಿದ್ದಿದ್ದೇ ಕೆಲಹೊತ್ತು ಏಳದೇ ಇದ್ದುದ್ದರಿಂದ ಆನೆ ಬಿಡಾರದ ಉಳಿದ ಸಿಬ್ಬಂದಿ ಅಲ್ಲಿಗೆ ದೌಡಾಯಿಸಿದ್ದು, ಆತನನ್ನು ಎತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಲ್ಲಿ ಯಾವುದೇ ಪ್ರೀವೆಡ್ಡಿಂಗ್ ಫೋಟೊಗ್ರಾಫಿಗೆ ಅವಕಾಶ ನೀಡಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Jumping spider | ಪಶ್ಚಿಮಘಟ್ಟದಲ್ಲಿ ಹೊಸ ಪ್ರಭೇದದ ‘ಜಂಪಿಂಗ್ ಸ್ಪೈಡರ್’ ಪತ್ತೆ

error: Content is protected !!