ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪಶ್ಚಿಮಘಟ್ಟ (Western Ghats) ಒಂದು ರಹಸ್ಯಗಳ ಖನಿಜ ಎನ್ನುವುದು ಪದೇ ಪದೆ ಸಾಬೀತು ಆಗುತ್ತಲೇ ಇದೆ. ಪ್ರಾಣಿ, ಪಕ್ಷಿ, ಕೀಟ ನಾನಾ ಬಗೆಯ ಜೀವವೈವಿಧ್ಯವನ್ನು ತನ್ನೊಡಲೊಳಗೆ ಹುದುಗಿಸಿ ಇಟ್ಟುಕೊಂಡಿರುವ ಪಶ್ಚಿಮಘಟ್ಟದಲ್ಲಿ ಇತ್ತೀಚೆಗೆ ಹೊಸ ಪ್ರಭೇದದ ‘ನೆಗೆಯುವ ಜೇಡ (ಜಂಪಿಂಗ್ ಸ್ಪೈಡರ್)’ ಪತ್ತೆಯಾಗಿದೆ.
READ | ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ‘ನೇರಳೆ ಏಡಿ’, ಕಾರವಾರದಲ್ಲೂ ಪತ್ತೆ, ತಜ್ಞರು ಹೇಳುವುದೇನು?
ಪತ್ತೆ ಹಚ್ಚಿದ ಸಂಶೋಧನಾ ತಂಡ
ದಕ್ಷಿಣ ಭಾರತದ ಶೆಂದೂರ್ನಿ ವನ್ಯಜೀವಿ ಅಭಯಾರಣ್ಯ(Shendurney Wildlife Sanctuary)ದಲ್ಲಿ ಈ ತಳಿಯ ಜೇಡ (Spider) ಪತ್ತೆಯಾಗಿದೆ. ಕೇರಳ ವಿಶ್ವವಿದ್ಯಾಲಯದ (Kerala university) ಪ್ರಾಣಿಶಾಸ್ತ್ರ ವಿಭಾಗದ (Department of Zoology) ಸಂಶೋಧಕಿ ಎ.ಅಸಿಮಾ, ವಿಭಾಗದ ಮುಖ್ಯಸ್ಥ ಜಿ.ಪ್ರಸಾದ್, ಚೆನ್ನೈನ ಸವಿತಾ ವೈದ್ಯಕೀಯ ಮತ್ತು ತಂತ್ರಜ್ಞಾನ ವಿಜ್ಞಾನಗಳ ಸಂಸ್ಥೆಯ (Saveetha Institute of Medical and Technical Sciences, Chennai) ಅಂಗರಚನಾಶಾಸ್ತ್ರ ವಿಭಾಗದ (Department of Anatomy) ಜಾನ್ ಟಿ.ಡಿ.ಕಾಬೆಲ್ ಅವರ ತಂಡ ಈ ತಳಿಯನ್ನು ಪತ್ತೆ ಹಚ್ಚಿದೆ. ಹೊಸ ಪ್ರಭೇದದ ತಳಿಯ ಬಗ್ಗೆ ಬ್ರಿಟಿಷ್ ಪುರಾತತ್ತ್ವ ಸಂಸ್ಥೆಯ ‘ಅರಾಕ್ನಾಲಜಿ’ (Arachnology) ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.
ಹೊಸ ಪ್ರಭೇದದ ನೆಗೆಯುವ ಜೇಡವು ಸಾಲ್ಟಿಸಿಡೆ ಕುಟುಂಬಕ್ಕೆ ಸೇರಿದ್ದು, ಇದಕ್ಕೆ ಪ್ಯಾಂಕೋರಿಯಸ್ ಸೆಬಾಸ್ಟಿಯಾನಿ (Pancorius sebastiani ) ಎಂದು ನಾಮಕರಣ ಮಾಡಲಾಗಿದೆ.