Arecanut tree sofa | ಅಡಿಕೆ ಮರದಿಂದ ಸೋಫಾ ಸೆಟ್, ಕಾಯಿಲೆಯಿಂದ ಹೊಳೆದ ಐಡಿಯಾ ಈಗ ಸಕ್ಸಸ್

Arecanut Sofa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಡಿಕೆಯಿಂದ ಚಹ, ಗ್ಲಾಸ್, ಹಾರ, ಬಣ್ಣ ಹೀಗೆ ನಾನಾ ಬಗೆಯ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ, ಇಲ್ಲೊಬ್ಬ ಯುವಕ ಅಡಿಕೆ ಮರದಿಂದ ಪೀಠೋಕರಣಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಸುಳ್ಯ ತಾಲೂಕು ಅರಂಬೂರಿನ ಕೃಷಿಕ ಕಿರಣ್ ಭಾರದ್ವಾಜ್ ಅವರು ಅಡಿಕೆ ಮರ ತ್ಯಾಜ್ಯವಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

arecanut tree

READ | ಅಡಿಕೆಯಿಂದ ರುಚಿಕರ ಉಪ್ಪಿನಕಾಯಿ ತಯಾರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ತಯಾರಿಕೆ ವಿಧಾನ ಹೇಗೆ, ಪ್ರಯೋಜನಗಳೇನು?

ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆಚುಕ್ಕಿ ರೋಗ ಬಂದಾಗ ತೋಟಗಳೇ ಹಾಳಾಗಿದ್ದವು. ಅಂತಹ ಮರಗಳನ್ನು ಕಡಿತಲೆ ಮಾಡಲಾಯಿತು. ಆದರೆ, ಆ ಸನ್ನಿವೇಶದಲ್ಲೇ ಕಿರಣ್ ಇಂತಹ ಮರಗಳನ್ನು ಬಳಸಿ ಪೀಠೋಪಕರಣ ತಯಾರಿಸುವ ಯೋಚನೆ ಮಾಡಿರುವುದು ವಿಶೇಷ.

ಭವಿಷ್ಯದಲ್ಲಿ ಇದೇ ಉದ್ಯಮವನ್ನು ಮುಂದುವರಿಸಬೇಕು. ಈ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಬೇಕಾದ ಅವಶ್ಯಕತೆ ಇದೆ. ಅಡಿಕೆ ಮರದಿಂದ ಬರೀ ಸೇಫಾ ಸೆಟ್ ಅಷ್ಟೇ ಅಲ್ಲ. ವಾಲ್ ಪಾರ್ಟಿಷನರ್, ಪೀಪಾಯ್, ಮಂಚ, ದಿವಾನ್, ಡೈನಿಂಗ್ ಟೇಬಲ್ ಇಂತಹ ವಿವಿಧ ಪೀಠೋಪಕರಣಗಳನ್ನು ಸಹ ತಯಾರಿಸಬಹುದು.
ಕಿರಣ್ ಭಾರದ್ವಾಜ್, ಪೀಠೋಪಕರಣ ತಯಾರಿಸಿದ ಯುವಕ

ರೋಗಗಳ ನಡುವೆ ಹೊಳೆದಿದ್ದೇ ಈ ಐಡಿಯಾ
ಅಡಿಕೆಗೆ ಹಳದಿ ಎಲೆಚುಕ್ಕಿ ರೋಗ ಬಂದಾಗ ಮರಗಳನ್ನು ಕಡಿಯುವ ಸನ್ನಿವೇಶ ಬಂದಿತ್ತು. ಆಗ ಹೊಳೆದಿದ್ದೇ ಅಡಿಕೆ ಮರದಿಂದ ಪೀಠೋಪಕರಣ ತಯಾರಿಸುವ ವಿಧಾನ. 25-30 ವರ್ಷ ಹಳೆಯ ಅಡಿಕೆ ಮರಗಳನ್ನು ಆಯ್ಕೆ ಮಾಡಿ ಅದನ್ನು ತುಂಡರಿಸಿ ಅದರ ಒಳ ತಿರುಳು ತೆಗೆದು ಅದರಿಂದ ಪೀಠೋಪಕರಣ ಮಾಡಿದ್ದಾರೆ.

Arecanut FB group joinಗೆದ್ದಲು ತಪ್ಪಿಸಲು ಸಾಂಪ್ರದಾಯಿಕ ಕ್ರಮ
ಅಡಿಕೆ ಮರ ಗಟ್ಟಿ ಹೌದು. ಆದರೆ, ಅದಕ್ಕೆ ಗೆದ್ದಲು ಹಿಡಿದರೆ? ಈ ಸಮಸ್ಯೆಗೂ ಪರಿಹಾರ ಕಂಡುಕೊಂಡಿದ್ದು, ಮರದವನ್ನು 15-20 ದಿನಗಳವರೆಗೆ ಉಪ್ಪು ನೀರಿನಲ್ಲಿ ನೆನೆಹಾಕಿ ಮತ್ತೆ ಒಂದು ವಾರ ಸಾದಾ ನೀರಿನಲ್ಲಿ ಹಾಕಿ ಒಣಗಿಸಲಾಗುತ್ತದೆ.
ಪಾಲಿಶ್ ಮಾಡುವುದೇ ಸವಾಲಾದ ಗಟ್ಟಿ ಹೆಜ್ಜೆ
ಅಡಿಕೆ ಮರದ ಪಾಲಿಶ್ ಮಾಡುವುದು ಕಷ್ಟ. ಮಿಲ್ ಗೆ ತೆಗೆದುಕೊಂಡು ಹೋದರೂ ತಮ್ಮ ಬ್ಲೇಡ್ ಗೆ ಸಮಸ್ಯೆ ಆಗುತ್ತದೆ ಎಂಬ ಮಾತುಗಳು ಕೇಳಿಬಂದವು. ಹೀಗಾಗಿ, ತಾವೇ ಯಂತ್ರ ಖರೀದಿಸಿ ಕೆಲಸ ಆರಂಭಿಸಿದರು. ಸೋಫಾದ ಕಾಲು, ಫ್ರೇಮ್ ಗಳನ್ನು ತೆಂಗಿನ ಮರದ ತುಂಡುಗಳಿಂದ ತಯಾರಿಸಿದರೆ ಉಳಿದ ರೀಪುಗಳನ್ನು ಅಡಿಕೆ ಮರದಿಂದ ಮಾಡಿದರು.

error: Content is protected !!