ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಗಾಂಧಿ ಪಾರ್ಕ್‍ನಲ್ಲಿ ಜ್ಯೂಸ್ ಕುಡಿದು ಇಬ್ಬರು ಮಕ್ಕಳು ಮೃತಪಟ್ಟ ಬೆನ್ನಲ್ಲೇ ಅವರ ತಾಯಿ ಸಹ ಶುಕ್ರವಾರ ಅಸುನೀಗಿದ್ದಾರೆ.
ಇದನ್ನೂ ಓದಿ | ತಾಯಿಯೊಂದಿಗೆ ಬಂದ ಇಬ್ಬರು ಮಕ್ಕಳ ಸಾವು
ಖಿನ್ನತೆಯಲ್ಲೇ ಪ್ರಾಣಬಿಟ್ಟಳು: ತಾಯಿ ಗೀತಾಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಎರಡು ಮುದ್ದಾದ ಮಕ್ಕಳನ್ನು ಕಳೆದುಕೊಂಡು ಖಿನ್ನಳಾಗಿದ್ದಳು ಎನ್ನಲಾಗಿದೆ. ಮೆಗ್ಗಾನ್ ಆಸ್ಪತ್ರೆಯ ಸಾಂತ್ವನ ಕೇಂದ್ರ ಆರೈಕೆಯಲ್ಲಿದ್ದ ಈಕೆ ಊಟ ಸಹ ಸರಿಯಾಗಿ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.