ರೇಡ್ ಮಾಡಿದ 42 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು, ಎಲ್ಲಿ, ಯಾವಾಗ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಹಾಗೂ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ 42 ಕ್ವಿಂಟಾಲ್ 20 ಕೆ.ಜಿ. ಅಕ್ಕಿಯನ್ನು ಜನವರಿ 11ರಂದು ಬಹಿರಂಗ ಹರಾಜು ಮಾಡಲಾಗುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ಅನ್ವಯ 11ರಂದು ಬೆಳಗ್ಗೆ 10ಕ್ಕೆ ಶಿವಮೊಗ್ಗ ಗ್ರಾಮಾಂತರ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ ಮತ್ತು ಎಪಿಎಂಸಿ ಆವರಣದಲ್ಲಿ ತಹಸೀಲ್ದಾರ್ ಸಮಕ್ಷಮ ಬಹಿರಂಗ ಹರಾಜು ಮಾಡುತ್ತಿದೆ.
ಒಂದು ಗಂಟೆ ಮುಂಚೆನ ಹಾಜರಿರಬೇಕು: ಆಸಕ್ತರು ಎಪಿಎಂಸಿ ಪರವಾನಿಗೆ ಹೊಂದಿರುವವರು ಷರತ್ತಿಗೊಳಪಟ್ಟು ಹರಾಜಿನಲ್ಲಿ ಒಂದು ಗಂಟೆ ಮುಂಚಿತವಾಗಿ ಹಾಜರಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!