Shimoga airport | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಚಳಿಗಾಲದಲ್ಲಿ ಇನ್ನಷ್ಟು ಹೆಚ್ಚಲಿದೆ‌ ಲ್ಯಾಂಡಿಂಗ್ ಸಮಸ್ಯೆ, ಕೇಂದ್ರ ಸಚಿವರಿಗೆ ಸಂಸದರ ಮನವಿ ಏನು?

Shivamogga Airport

 

 

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣ (shivamogga airport)ದಿಂದ ಈಗಾಗಲೇ ಬೆಂಗಳೂರು ಸೇರಿದಂತೆ ನಾಲ್ಕು ಪ್ರಮುಖ ನಗರಗಳಿಗೆ ಸಂಚಾರ ಆರಂಭಗೊಂಡಿದ್ದು, ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಹಾಗೂ ಭದ್ರತೆ ಕುರಿತು ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

READ |  ತೂಕದಲ್ಲಿ‌ ಮೋಸ‌ ತಪ್ಪಿಸಲು ಕಾರ್ಖಾನೆಗಳಿಗೆ ರೂಲ್ಸ್, ಏನದು?

ಅದರಲ್ಲೂ ಈ ಚಳಿಗಾಲದ ಮಂಜು ಮುಸುಕಿದ ವಾತಾವರಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಗೆ ದೃಷ್ಟಿಗೋಚರತೆ (Visibility) ಸಮಸ್ಯೆ ಎದುರಾಗಲಿದ್ದು, ಇದರ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (Airport Authority of India) ಹಾಗೂ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಗೆ (Bureau of Civil Aviation security) ಸೂಚಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದ್ಯಿತ ಸಿಂದಿಯಾ (Jyotiraditya M Shindia) ಅವರಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವ್ಯವಸ್ಥಿತ ವಿಮಾನ ಸಂಚಾರ ಹಾಗೂ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ತೀರಾ ಅನಿವಾರ್ಯವಾಗಿದ್ದು, ಸಚಿವರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

error: Content is protected !!