Bike alteration | ಬಜಾಜ್ ಕವಾಸಕಿಯನ್ನು ಯಮಹ ಆರ್.ಎಕ್ಸ್ 100 ರೀತಿ ಮಾರ್ಪಡಿಸಿದವನಿಗೆ ಬಿತ್ತು ಭಾರಿ ದಂಡ!

bike 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಜಾಜ್ ಕವಾಸಕಿ ಬೈಕ್ ಅನ್ನು ಯಮಹ ಆರ್.ಎಕ್ಸ್ 100 ರೀತಿ ಕಾಣುವಂತೆ ಸಂಪೂರ್ಣ ಮಾರ್ಪಡಿಸಿದ ಬೈಕ್ ಮಾಲೀಕನಿಗೆ ಮೂರನೇ ಎ.ಸಿ.ಜೆ ಆ್ಯಂಡ್ ಜೆ.ಎಂ.ಎಫ್.ಸಿ ನ್ಯಾಯಾಲಯ ₹16,500 ದಂಡ ವಿಧಿಸಿ ಆದೇಶಿಸಿದೆ.
ದ್ವಿಚಕ್ರ ವಾಹನದ ಸವಾರ ಆರ್.ಎಂ.ಎಲ್ ನಗರದ ನಿವಾಸಿ ಧನಂಜಯ(19) ಎಂಬಾತನಿಗೆ ದಂಡ ವಿಧಿಸಲಾಗಿದೆ.

READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಚಳಿಗಾಲದಲ್ಲಿ ಇನ್ನಷ್ಟು‌ ಹೆಚ್ಚಲಿದೆ ಲ್ಯಾಂಡಿಂಗ್ ಸಮಸ್ಯೆ, ಕೇಂದ್ರಕ್ಕೆ ಸಂಸದ‌ ರಾಘವೇಂದ್ರ ಮನವಿ ಏನು?

ಕರ್ಕಶ ಶಬ್ದ ಉಂಟು ಮಾಡುವ ಹಾರ್ನ್
ಬೈಕ್ ಅನ್ನು ಸಂಪೂರ್ಣ ಮಾರ್ಪಾಡು ಮಾಡಿಸಿ, ಅದಕ್ಕೆ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ ಅಳವಡಿಸಿಕೊಂಡು ವಾಹನವನ್ನು ಚಲಾಯಿಸುತ್ತಿದ್ದಾನೆಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ನವೀನ್ ಕುಮಾರ್ ಮಠಪತಿ ಐಎಂವಿ ಕಾಯ್ದೆ ಅಡಿ ಲಘು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ವರದಿಯನ್ನು ಸಲ್ಲಿಸಿದ್ದರು.

error: Content is protected !!