Police Raid | ಗಾಂಧಿನಗರದ ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ, ಪೊಲೀಸರ ದಾಳಿ

Jaya nagar police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗಾಂಧಿನಗರದ ಮೊದಲನೇ ಪ್ಯಾರಲಲ್ ರಸ್ತೆಯ ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಆರೋಪದ ಮೇರೆಗೆ ಪೊಲೀಸರು ದಾಳಿ ನಡೆಸಿ ಒಬ್ಬರನ್ನು ಬಂಧಿಸಿ, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

READ |  ಮಹಿಳೆಯರೇ ಎಚ್ಚರ, ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳತನ ಗ್ಯಾಂಗ್ ಸಕ್ರಿಯ, ಒಂದೇ ದಿನ 3 ಕಡೆ ಸರ ಸರಗಳವು

ಕಟ್ಟಡವೊಂದರ ನೆಲ ಮಾಳಿಗೆಯಲ್ಲಿ ದಂಧೆ ನಡೆಸುತ್ತಿರುವ ಬಗ್ಗೆ ಬಂದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ಕಚೇರಿ ಹಾಗೂ ಗೋಡೌನ್ ಗೋಸ್ಕರ ಕಟ್ಟಡವೊಂದನ್ನು ನೆಲ ಮಹಡಿಯಲ್ಲಿ ಯುವಕನೊಬ್ಬ ಬಾಡಿಗೆ ಪಡೆದಿದ್ದ. ಅದರಲ್ಲಿ ವೇಶ್ಯಾವಾಟಿಕೆ ಮಾಡುತ್ತಿರುವ ಬಗ್ಗೆ ಬಂದಿದ್ದ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!