Job alert | ಶಿವಮೊಗ್ಗದಲ್ಲಿ ಹೊಸ ಹುದ್ದೆಗಳ ಸೃಷ್ಟಿ, ಭರ್ತಿಗೆ ಅರ್ಜಿ ಆಹ್ವಾನ, ಯಾರಿಗೆಲ್ಲ ಅವಕಾಶ?

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜನ ಆರೋಗ್ಯ ಕೇಂದ್ರ, ಎಪಡಿಮಿಯಾಲಜಿ ವಿಭಾಗ, ನಿಮ್ಹಾನ್ಸ್-ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅನುಷ್ಠಾನಗೊಂಡಿರುವ ‘ಯುವ ಸ್ಪಂದನ’ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸಲು ಹೊಸದಾಗಿ ಯುವ ಪರಿವರ್ತಕರು ಹಾಗೂ ಯುವ ಸಮಾಲೋಚಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

READ | ಇಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಮೂವರು ಸಚಿವರು, ಇಬ್ಬರು ರಾಜ್ಯಮಟ್ಟದ ಪ್ರಮುಖ ಅಧಿಕಾರಿಗಳು, ನಡೆಯಲಿದೆ ಪ್ರಮುಖ ಮೀಟಿಂಗ್, ಕಾರಣವೇನು?

ಯಾರಿಗೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಪ್ರತಿ ಜಿಲ್ಲೆಗೆ 3 ಪುರುಷ ಹಾಗೂ 2 ಮಹಿಳೆಯರು ಸೇರಿ 5 ಜನ ಯುವ ಪರಿವರ್ತಕರನ್ನು ಆಯ್ಕೆ ಮಾಡಲಾಗುವುದು. ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಹಾಗೂ 21 ರಿಂದ 35 ವರ್ಷದೊಳಗಿನ ಅಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ತಿಂಗಳು ಗೌರವಧನವಾಗಿ ₹7 ಸಾವಿರ ರೂ.ಗಳನ್ನು ನೀಡಲಾಗುವುದು.
ಪ್ರತಿ ಜಿಲ್ಲೆಗೆ ಓರ್ವ ಯುವ ಸಮಾಲೋಚಕರನ್ನು ಆಯ್ಕೆ ಮಾಡಲಾಗುವುದು. ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಹಾಗೂ 21 ರಿಂದ 35 ವರ್ಷದೊಳಗಿನ ಅಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ತಿಂಗಳು ಗೌರವಧನವಾಗಿ ₹9 ಸಾವಿರ ರೂ.ಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ, ದೂ.ಸಂ.: 08182-223328 ನ್ನು ಸಂಪರ್ಕಿಸುವುದು.

error: Content is protected !!