ಬಿ.ಎಚ್.ರಸ್ತೆಯಲ್ಲಿ ಸರಣಿ ಅಪಘಾತ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿ ಕಾರು ಚಾಲಕನೊಬ್ಬ ರಸ್ತೆಯಲ್ಲಿದ್ದ ಗುಂಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಕರ್ನಾಟಕ ಸಂಘದ ಎದುರುಗಡೆ ರಸ್ತೆಯಲ್ಲಿ ಕಾರು ಚಾಲಕ ದಿಢೀರ್ ಬ್ರೇಕ್ ಹಾಕಿದ್ದು ಹಿಂದುಗಡೆ ಬರುತ್ತಿದ್ದ ಓಮ್ನಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ಓಮ್ನಿಗೆ ಡಿಕ್ಕಿ ಹೊಡೆದಿದೆ. ಕಾರು ಮತ್ತು ಓಮ್ನಿ ನಜ್ಜುಗುಜ್ಜಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

error: Content is protected !!