Sigandur Chowdeshwari | ಸಿಗಂದೂರು ಜಾತ್ರೆಗೆ ಡೇಟ್ ಫಿಕ್ಸ್, ಯಾವ ದಿನ ಏನೆಲ್ಲ ಕಾರ್ಯಕ್ರಮ?

sigandur chowdeshwari temple

 

 

ಸುದ್ದಿ ಕಣಜ.ಕಾಂ ಸಾಗರ
SAGAR: ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಿಯ ಮಕರ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ದಿನಾಂಕ‌ ನಗದಿಯಾಗಿದೆ. ಜಾತ್ರಾ ಮಹೋತ್ಸವವು ಜನವರಿ 14 ಮತ್ತು 15ರಂದು ನಡೆಯಲಿದೆ ಎಂದು ಶ್ರೀಕ್ಷೇತ್ರದ ಧರ್ಮದರ್ಶಿ ರಾಮಪ್ಪ ತಿಳಿಸಿದ್ದಾರೆ.
ಮಳಲಿ ಮಠದ ಡಾ.ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇರಳ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಧರ್ಮಜ್ಯೋತಿಗೆ ಹಾಗೂ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

READ | ಎಸ್.ಪಿ ಕಚೇರಿಗೆ ಬಿಜೆಪಿ ಮುತ್ತಿಗೆ, ಈಶ್ವರಪ್ಪ, ಚನ್ನಿ‌ ಸೇರಿ‌ ಹಲವರ ವಶ, ಕಾರಣವೇನು?

ಯಾವ ದಿನ ಏನು ಕಾರ್ಯಕ್ರಮ?
ಜ.14ರಂದು ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ ಪೂಜೆ, ಗೋಪೂಜೆ, ಗುರು ಪೂಜೆ, ಹೋಮ, ರಥ ಮತ್ತು ಪಲ್ಲಕ್ಕಿ ಮೂಲ ಸ್ಥಾನಕ್ಕೆ ಹೊರಡುವುದು. ದೇವಿಯ ಮೂಲಸ್ಥಳವಾದ ಸೀಗೆ ಕಣಿವೆಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಧರ್ಮಜ್ಯೋತಿಯ ಮೆರವಣಿಗೆ, ಸಂಜೆ 5ಕ್ಕೆ ಗುರು ಪೂಜೆ, 6 ಗಂಟೆಗೆ ಗಂಗಾರತಿ ನಡೆಯಲಿದೆ.
ಜ.15ರಂದು ಬೆಳಗ್ಗೆ ನವಚಂಡಿಕಾ ಹೋಮ, ದುರ್ಗಾ ಪೂಜೆ, ರಂಗ ಪೂಜೆ ನಡೆಯಲಿದೆ. ಎರಡೂ ದಿನ ಸಂಜೆ ಯಕ್ಷಗಾನ, ಮ್ಯಾಜಿಕ್ ಸೇರಿದಂತೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ನಿತ್ಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಸಾರಿಗೆ ವ್ಯವಸ್ಥೆ ಮತ್ತು ವಿಶೇಷ ಲಾಂಚ್ ಲಭ್ಯ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಕೋರಲಾಗಿದೆ.

error: Content is protected !!