Black pepper | 4 ಕ್ವಿಂಟಾಲ್ ಮೆಣಸು ತೆಗೆದುಕೊಂಡು ಎಸ್ಕೇಪ್, ಮೂವರು ಅರೆಸ್ಟ್

pepper

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಲಕ್ಷಾಂತರ ಮೌಲ್ಯದ ಮೆಣಸು ತೆಗೆದುಕೊಂಡು ಹೋಗಿ‌ ಮೋಸ ಮಾಡಿದ್ದ ಮೂವರನ್ನು ಬಂಧಿಸಲಾಗಿದೆ.
ಸಾಗರದ ವಿನೋಬನಗರ ನಿವಾಸಿ ಅಕ್ಷಯ(26), ಶೆಟ್ಟಿಸರ ಗ್ರಾಮದ ಎಸ್.ಕೆ.ಹರ್ಷಿತ್(28), ರಾಮನಗದ್ದೆಯ ಕುಮಾರ ಅಭಿನಂದನ(26) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಅಂದಾಜು ₹2,76,675 ರೂ. ಮೌಲ್ಯದ ಒಟ್ಟು 4 ಕ್ವಿಂಟಾಲ್ 25 ಕೆ.ಜಿ ತೂಕದ ಕಾಳುಮೆಣಸನ್ನು ವಶ ಪಡಿಸಿಕೊಳ್ಳಲಾಗಿದೆ.

READ | ಯುವನಿಧಿಗೆ ಹೆಸರು ನೋಂದಾಯಿಸುವುದು ಹೇಗೆ? ಇಲ್ಲಿದೆ ಮಹತ್ವದ ಮಾಹಿತಿ

ಏನಿದು ಪ್ರಕರಣ?

Black Pepper
Black Pepper

2023ರ ಅಕ್ಟೋಬರ್‌ 5ರಂದು ಹರೀಶ್ ಹೆಗ್ಡೆ‌ ಎಂಬ ಹೆಸರು ಹೇಳಿಕೊಂಡ ವ್ಯಕ್ತಿಯೊಬ್ಬನು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎನ್ ನಗರ ಹೊಸ ಬಡಾವಣೆಯ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಾಳು ಮೆಣಸು ಕೊಂಡು ಕೊಳ್ಳುತ್ತೇನೆಂದು ಹೇಳಿ, ಕಂಬಳಿಕೊಪ್ಪ ಎಸ್.ಬಿ.ಐ ಶಾಖೆಯ ಮುಕ್ತಾಯ ಮಾಡಲಾದ ಖಾತೆಯ ಚೆಕ್ ನೀಡಿ, ಅಂದಾಜು ಮೌಲ್ಯ ₹2,76,675 ಮೌಲ್ಯದ 4 ಕ್ವಿಂಟಲ್ 25 ಕೆಜಿ ಕಾಳು ಮೆಣಸನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Crime logo
ಪ್ರಕರಣ ಭೇದಿಸಿದ ತಂಡ
ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಪೊಲೀಸ್ ಅಧೀಕ್ಷಕ‌ ಜಿ.ಕೆ.ಮಿಥುನ್ ಕುಮಾರ್ (G.K. Mithun kumar), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ (Anil kumar Bhumaraddy), ಎ.ಜಿ. ಕಾರಿಯಪ್ಪ ಮಾರ್ಗದರ್ಶನದಲ್ಲಿ ಸಾಗರ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಟಿ.ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರ ಟೌನ್ ಪೊಲೀಸ್ ಠಾಣೆ ಪಿಐ ಸೀತಾರಾಮ್ ನೇತೃತ್ವದಲ್ಲಿ ಪಿಎಸ್ಐ ನಾಗರಾಜ್ ಮತ್ತು ಸಿಬ್ಬಂದಿ ರತ್ನಾಕರ್, ಶ್ರೀನಿವಾಸ್, ಮೆಹಬೂಬ್, ವಿಕಾಸ್, ಕೃಷ್ಣಮೂರ್ತಿ, ವಿಶ್ವನಾಥ್, ಜಿಲ್ಲಾ ಪೊಲೀಸ್ ಕಚೇರಿ ಶಿವಮೊಗ್ಗದ ತಾಂತ್ರಿಕ ಸಿಬ್ಬಂದಿ ಗುರುರಾಜ್, ಇಂದ್ರೇಶ್, ವಿಜಯ್‌ ಕುಮಾರ್‌ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

error: Content is protected !!