Car Accident | ರಸ್ತೆ ಪಕ್ಕ ನಿಂತವರ ಮೇಲೆ ಹರಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ, ಮುಂದೇನಾಯ್ತು?

Anandpura Accident

 

 

ಸುದ್ದಿ ಕಣಜ.ಕಾಂ ಸಾಗರ
SAGAR: ತಾಲೂಕಿನ ಆನಂದಪುರ ಸಮೀಪದ ಹೊಸೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ನಿಂತಿದ್ದವರಿಗೆ ಗುದ್ದಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಹೇಗೆ ನಡೆಯಿತು ಘಟನೆ?
ಶಿವಮೊಗ್ಗದಿಂದ ಸಾಗರದ ಕಡೆಗೆ ಚಲಿಸುತ್ತಿದ್ದ ಕಾರು ದಿಢೀರ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕ ನಿಂತಿದ್ದವರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.

READ | ಶಿವಮೊಗ್ಗದಿಂದ ಹೊರಡಬೇಕಿದ್ದ ವಿಮಾನ ಕೊನೆಯ ಕ್ಷಣದಲ್ಲಿ ರದ್ದು, ಸಂಸ್ಥೆಯ ವಿರುದ್ಧವೇ ದೂರು

ಹೊಸೂರು ಗ್ರಾಮದ ರಾಜಪ್ಪ, ವೀರಭದ್ರಪ್ಪ ಎಂಬುವವರ ಕಾಲಿಗೆ ಗಂಭೀರವಾಗಿದೆ. ಚಿಕಿತ್ಸೆಗೋಸ್ಕರ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ. ಹೆಚ್ಚುವರಿ ಚಿಕಿತ್ಸೆಗೆಂದು ಮಣಿಪಾಲಿಗೆ ಕರೆದುಕೊಂಡು ಹೋಗಲಾಗಿದೆ. ಮತ್ತೊಬ್ಬ ಗಣಪತಿ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!