ಮೆಡಿಕಲ್ ಸೀಟ್ ಕೊಡಿಸುವುದಾಗಿ ಭದ್ರಾವತಿ ವ್ಯಕ್ತಿಗೆ ಟೋಪಿ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಕೊಡಿಸುವುದಾಗಿ ನಂಬಿಸಿ ಒಂದು ಲಕ್ಷ ರೂಪಾಯಿ ಪಡೆದು ಮೋಸ ಮಾಡಲಾಗಿದೆ.
ಭದ್ರಾವತಿಯ ಭೂತನಗುಡಿಯ ರಫಿಕ್ ಅಹಮ್ಮದ್ ಎಂಬಾತನೇ ಮೋಸ ಹೋದಾತ. ರಫಿಕ್ ಅವರ ಮಗನಿಗೆ ಸರ್ಕಾರಿ ಸೀಟ್ ಕೊಡಿಸುವುದಕ್ಕೆ ಆರು ಲಕ್ಷ ರೂಪಾಯಿ ಅಗತ್ಯವಿರುವುದಾಗಿ ಹೇಳಿ ಮುಂಗಡವಾಗಿ ಒಂದು ಲಕ್ಷ ರೂಪಾಯಿ ಪಡೆದಿದ್ದ.

ಕಲ್ಕತ್ತಾದ ರಿತೇಷ್ ಅಗರ್ವಾಲ್ ಎಂಬಾತನೇ ಮೋಸ ಮಾಡಿದ ವ್ಯಕ್ತಿ. ಹಣ ಪಡೆದ ನಂತರ ಫೋನ್‍ಗೆ ಸಿಕ್ಕಿಲ್ಲ. ಹೀಗಾಗಿ, ರಫೀಕ್ ಭದ್ರಾವತಿ ಓಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

error: Content is protected !!