Bike wheeling | ಬೈಕ್ ವ್ಹೀಲಿಂಗ್ ಮಾಡಿದ ಯುವನಿಗೆ ಬಿತ್ತು ಭಾರೀ ದಂಡ

Bike wheeling

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ಮತ್ತು ಅದರ ವಿಡಿಯೋ ಚಿತ್ರೀಕರಿಸಿದ ಇಬ್ಬರಿಗೂ ಶಿವಮೊಗ್ಗ ನ್ಯಾಯಾಲಯ ದಂಡ ವಿಧಿಸಿ ಆದೇಶಿಸಿದೆ.
ಯಾರಿಗೆಷ್ಟು ದಂಡ?
ಬೈಕ್ ವ್ಹೀಲಿಂಗ್ ಮಾಡಿದ ಯುವಕನಿಗೆ ₹15,500 ದಂಡ ಹಾಗೂ ಮತ್ತೊಂದು ಬೈಕ್ ಚಲಾಯಿಸುತ್ತ ವಿಡಿಯೋ ಚಿತ್ರೀಕಿರಿಸಿದವನಿಗೆ ₹5000 ದಂಡ ವಿಧಿಸಲಾಗಿದೆ.

READ | ಕೆರೆ ಕಾಮಗಾರಿ ವೇಳೆ ದಿಢೀರ್ ಕುಸಿದು ಬಿದ್ದ ಕಾರ್ಮಿಕ ಸಾವು

ವಿಡಿಯೋ ಸೋಶಿಯಲ್ ಮೀಡಿಯಾಗೆ ಬಿಟ್ಟಿದ್ದ ಯುವಕ
ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಸಂದೀಪ್ ಬೈಕ್ ಪತ್ತೆ ಹಚ್ಚಿದ್ದರು. ಪ್ರಕರಣದ ತನಿಖೆ ನಡೆಸಿದ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ‌ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು.
ಶಿವಮೊಗ್ಗದಲ್ಲಿ‌ ಇತ್ತೀಚೆಗೆ ಬೈಕ್ ವ್ಹೀಲಿಂಗ್, ಸ್ಟಂಟ್ ಮಾಡುತ್ತಿದ್ದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಸಂಚಾರ ಪೊಲೀಸರು ಅಂತಹ ವಾಹನಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯಾಲಯ ದಂಡ ಸಹ ವಿಧಿಸಿದೆ.

 

error: Content is protected !!