Dead body | ರೈಲ್ವೆ ಹಳಿಯ ಮೇಲೆ ಮೃತ ದೇಹ ಪತ್ತೆ

Dead body

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ-ಭದ್ರಾವತಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿಮಿ ನಂ 44/ 500-600 ರ ಭದ್ರಾವತಿ ರೈಲು ನಿಲ್ದಾಣದ ವೇದಿಕೆ ನಂ 1 ರ ರೈಲ್ವೆ ಹಳಿಗಳಲ್ಲಿ ಸುಮಾರು 60 ವರ್ಷದ ಗಂಡಸಿನ ಶವ ಪತ್ತೆಯಾಗಿದೆ.
ಜ.29 ರಂದು ರಾತ್ರಿ ಈ ಘಟನೆ ನೆಡೆದಿದ್ದು, ಮೃತ ದೇಹವನ್ನು ವಾರಸುದಾರರ ಪತ್ತೆ ಕುರಿತು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.

READ | ನಿಮ್ಮ ಬಳಿ ವನ್ಯಜೀವಿಗಳ ಅಂಗಾಂಗಗಳಿವೆಯೇ? ಕೂಡಲೇ ಹಿಂದಿರುಗಿಸಿ, ಎಲ್ಲಿ ಕೊಡಬೇಕು?

ಮೃತನು ಸುಮಾರು 55 ರಿಂದ 60 ವರ್ಷ, 5.8 ಅಡಿ ಎತ್ತರ, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡನೆಯ ಮುಖ, ಅಗಲವಾದ ಹಣೆ ದಪ್ಪ ಬಿಳಿ ಮೀಸೆ ತಲೆಯಲ್ಲಿ 2 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು, ಸುಮಾರು 1 ಇಂಚು ಉದ್ದದ ಬಿಳಿ ಮೀಸೆ ಗಡ್ಡ ಬಿಟ್ಟಿದ್ದು, ಕಣ್ಣುಗಳು ಅರೆತೆರೆದಿರುತ್ತವೆ.
ಆಕಾಶ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹರಿದು ರಕ್ತಮಯವಾಗಿರುತ್ತದೆ, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ ಕೆಂಪು ಬಣ್ಣದ ಚಪ್ಪಲಿ ಧರಿಸಿರುತ್ತಾನೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ: 08182 222974, 9480802124 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

error: Content is protected !!