ಸಾಗರಕ್ಕೆ ಪೊಲೀಸ್ ಶೆಲ್ಟರ್, ಭದ್ರಾವತಿಗೆ ಆರ್.ಎ.ಎಫ್ ತಾಲೂಕಿಗೊಂದು ಯೋಜನೆ ಇಲ್ಲಿದೆ ಮಾಹಿತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾಗರಕ್ಕೆ ಪೊಲೀಸ್ ಶೆಲ್ಟರ್, ತೀರ್ಥಹಳ್ಳಿಗೆ ಸೈನಿಕ್ ಶಾಲೆ, ಭದ್ರಾವತಿಗೆ ಆರ್.ಎ.ಎಫ್, ಶಿವಮೊಗ್ಗಕ್ಕೆ ಕೇಂದ್ರೀಯ ಸೈನಿಕ್ ವಿದ್ಯಾಲಯ ಹೀಗೆ ತಾಲೂಕಿಗೊಂದು ಯೋಜನೆ ತರುವ ಉದ್ದೇಶವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇದನ್ನೂ ಓದಿ । ಉಕ್ಕಿನ ನಗರಿಯಲ್ಲಿ ತಲೆ ಎತ್ತಲಿರುವ ಆರ್.ಎ.ಎಫ್ ಘಟಕ ಹೇಗಿರಲಿದೆ? ಬಟಾಲಿಯನ್ ಕೆಲಸವೇನು?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಅಧಿಕ ಆದ್ಯತೆ ನೀಡಲಾಗುತ್ತಿದೆ. ಲೋಕಸಭೆ ಸದಸ್ಯನಾಗಿ ಒಂದೊಂದು ತಾಲೂಕಿಗೆ ಒಂದೊಂದು ಯೋಜನೆ ತರಬೇಕೆಂಬ ನಿರೀಕ್ಷೆ ಹೊಂದಿದ್ದೇನೆ ಎಂದು ಆಶಯ ಹೇಳಿಕೊಂಡರು.

ಈ ಎಲ್ಲ ಯೋಜನೆಗಳೆಡೆ ನಿರಂತರ ಪ್ರಯತ್ನಶೀಲನಾಗಿದ್ದೇನೆ. ಶೀಘ್ರವೇ ಇನ್ನುಳಿದವುಗಳ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

error: Content is protected !!