Child Death | ನೀರು ತುಂಬಿದ ಬಕೆಟ್‍ಗೆ ಬಿದ್ದು ಮಗು ಸಾವು, ಹೇಗಾಯ್ತು ಘಟನೆ?

Bucket

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಮನೆಯಲ್ಲಿ ತುಂಬಿದ ಬಕೆಟ್ ಇಡುವ ಮುನ್ನ ಹುಷಾರ್. ಕಾರಣ, ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ಮಧ್ಯಾಹ್ನ ಮಗುವೊಂದು ತುಂಬಿದ ಬಕೆಟ್‍ಗೆ ಬಿದ್ದು ಮೃತಪಟ್ಟಿದೆ.

READ | ಗೃಹಿಣಿ ಅನುಮಾನಾಸ್ಪದ ಸಾವು, ಶವವಿಟ್ಟು ಪ್ರತಿಭಟಿಸಿದ ಕುಟುಂಬ, ಮುಂದೇನಾಯ್ತು? | ದಾರಿಹೋಕನಿಗೆ ಗುದ್ದಿದ ವಾಹನ ವ್ಯಕ್ತಿ ಸ್ಥಳದಲ್ಲೇ ಸಾವು

ಆಸಿಫ್ ಅವರ ಪುತ್ರಿ ಅನಮ್ ಫಾತಿಮಾ ಮೃತ ಮಗು. ಮಧ್ಯಾಹ್ನ ಮನೆಯವರೆಲ್ಲರೂ ನಿದ್ರಿಸುತ್ತಿದ್ದಾಗ ಮೂಲೆಯಲ್ಲಿದ್ದ ಬಕೆಟ್ ನಿಂದ ನೀರು ತೆಗೆಯಲು ಮುಂದಾದ ಮಗು ಆಯತಪ್ಪಿ ಬಕೆಟಿಗೆ ಬಿದ್ದಿದೆ ಎಂದು ತಿಳಿದುಬಂದಿದೆ. ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

error: Content is protected !!