Spotted Deer | ಶರಾವತಿ ಸಿಂಗಳಿಕ ಅಭಯಾರಣ್ಯದಲ್ಲಿ ಜಿಂಕೆ ಬೇಟೆ, ಆರೋಪಿಗಳು ಅರೆಸ್ಟ್

Spotted deer

 

 

ಸುದ್ದಿ ಕಣಜ.ಕಾಂ ಕಾರ್ಗಲ್
KARGAL: ಕಾರ್ಗಲ್ ಸಮೀಪದ ಶರಾವತಿ ಸಿಂಗಳಿಕ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ ಆಡಿದ ಆರೋಪದ ಮೇರೆಗೆ ಗುರುವಾರ ಮೂವರನ್ನು ಬಂಧಿಸಲಾಗಿದೆ.
ಅಂಬಾರಗೋಡ್ಲು ಹಿನ್ನೀರಿನ ದಡದಲ್ಲಿ ನಾಡ ಬಂದೂಕಿನಿಂದ ಜಿಂಕೆಯನ್ನು ಬುಧವಾರ ರಾತ್ರಿ ಬೇಟೆ ಆಡಲಾಗಿದೆ. ಬೇಟೆ ಪ್ರಾಣಿಯನ್ನು ಪಾಲು ಮಾಡಿಕೊಳ್ಳುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿüಸಲಾಗಿದೆ.
ಆರೋಪಿಗಳ ಬಳಿಯಿಂದ ಜಿಂಕೆ ಚರ್ಮ, ನಾಡ ಬಂದೂರು ವಶಪಡಿಸಿಕೊಳ್ಳಲಾಗಿದೆ.

READ | ದೆಹಲಿಯಿಂದ‌ ಶಿವಮೊಗ್ಗಕ್ಕೆ ಬಂದ ಈಶ್ವರಪ್ಪ, ಚುನಾವಣೆ ಸ್ಪರ್ಧೆ ಬಗ್ಗೆ ಹೇಳಿದ್ದೇನು?

error: Content is protected !!