353 ನಿರುದ್ಯೋಗಿಗಳ ಬಾಳಲ್ಲಿ ಬೆಳಕಾದ ಉದ್ಯೋಗ ಮೇಳ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 353 ಅಭ್ಯರ್ಥಿಗಳಿಗೆ ವಿವಿಧೆಡೆ ಉದ್ಯೋಗ ದೊರೆತಿದೆ.

ಇದನ್ನೂ ಓದಿ । ಜನವರಿ 20ರಿಂದ ಮೈಸೂರು-ತಾಳಗುಪ್ಪ ರೈಲು ಪುನರಾರಂಭ, ಟಿಕೆಟ್ ಬುಕಿಂಗ್ ಹೇಗೆ ಮಾಡಬೇಕು ಇಲ್ಲಿದೆ ಮಾಹಿತಿ

ಕೋವಿಡ್‍ನಿಂದ ಉದ್ಯೋಗ ಕಳೆದು ಸಂಕಷ್ಟದಲ್ಲಿದ್ದ ಹಲವರಿಗೆ ಇದರಿಂದ ಪ್ರಯೋಜನವಾಗಿದೆ. ಉದ್ಯೋಗ ಮೇಳದಲ್ಲಿ ಶಿವಮೊಗ್ಗ ಮಾತ್ರವಲ್ಲದೇ ನೆರೆಯ ಜಿಲ್ಲೆಗಳಿಂದಲೂ ಉದ್ಯೋಗ ಆಕಾಂಕ್ಷಿಗಳು ಆಗಮಿಸಿದ್ದರು. ಒಂದು ದಿನದ ಮೇಳದಲ್ಲಿ 2 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದು, ವಿಶೇಷವಾಗಿತ್ತು.

ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಕೆ.ಎಸ್.ಆರ್.ಟಿಸಿ.ಯಲ್ಲಿರುವ ಡ್ರೈವಿಂಗ್ ತರಬೇತಿ, ಡೊಮೆಸ್ಕಿಕ್ ಎಲೆಕ್ಟ್ರಿಕಲ್, ಕಂಪ್ಯೂಟರ್ ಟ್ರೈನಿಂಗ್ ನೀಡಲಾಗುತ್ತಿದೆ.
– ಖಲಂದರ್ ಖಾನ್, ಉದ್ಯೋಗ ಅಧಿಕಾರಿ, ಶಿವಮೊಗ್ಗ

ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಶ್ರಯದಲ್ಲಿ 7, 10, ಪಿಯುಸಿ, ಐಟಿಐ, ಬಿಇ, ಯಾವುದೇ ಪದವಿ, ಸ್ನಾತಕೋತ್ತರ ಪದವೀಧರರು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.

ಭಾಗವಹಿಸಿದ್ದ ಕಂಪೆನಿಗಳು: ಉದ್ಯೋಗ ಮೇಳದಲ್ಲಿ ಒಟ್ಟು 26 ಕಂಪೆನಿಗಳು ಭಾಗವಹಿಸಿದ್ದವು. ಅದರಲ್ಲಿ 2 ಬೆಂಗಳೂರಿನವುಗಳಾದರೆ, ಇನ್ನುಳಿದವು ಶಿವಮೊಗ್ಗ ಮೂಲದ್ದಾಗಿದ್ದವು. ಒಟ್ಟು 850 ಹುದ್ದೆಗಳ ಖಾಲಿ ಇದ್ದವು. ಅದರಲ್ಲಿ 353 ಭರ್ತಿಯಾಗಿದ್ದು, ಇನ್ನುಳಿದವುಗಳಿಗೆ ಶಾರ್ಟ್‍ಲಿಸ್ಟ್ ಮಾಡಲಾಗಿದೆ.
ಯಾವ ಹುದ್ದೆಗಳಿಗೆ ನೇಮಕ: ಶಿವಮೊಗ್ಗದಲ್ಲಿರುವ ಫೌಂಡ್ರಿ, ಬಿಪಿಒ, ಡ್ರೈವಿಂಗ್, ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

error: Content is protected !!