ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಏಳು ಕಡೆಗಳಲ್ಲಿ ಪ್ರತಿ ಆರೋಗ್ಯ ಸಂಸ್ಥೆಯಲ್ಲಿ ನೂರರಂತೆ ಒಟ್ಟು 700 ಆರೋಗ್ಯ ಸಿಬ್ಬಂದಿಯನ್ನು ಕೋವಿಡ್ ಲಸಿಕೆಗೆ ಆಯ್ಕೆ ಮಾಡಲಾಗಿದೆ. ಆದರೆ, ಸಿಬ್ಬಂದಿಯಿಂದ ಪ್ರತಿಕ್ರಿಯೆಯೇ ವ್ಯಕ್ತವಾಗುತ್ತಿಲ್ಲ. ಮಂಗಳವಾರ 700 ಜನರಲ್ಲಿ ಕೇವಲ 357 ಅಂದರೆ ಶೇ.51ರಷ್ಟು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ । 353 ನಿರುದ್ಯೋಗಿಗಳ ಬಾಳಲ್ಲಿ ಬೆಳಕಾದ ಉದ್ಯೋಗ ಮೇಳ
ಎಲ್ಲಿ ಎಷ್ಟು: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಎರಡು ಕೇಂದ್ರಗಳಿದ್ದು ಒಂದರಲ್ಲಿ 100ರಲ್ಲಿ ಕೇವಲ ಶೇ.20 ಹಾಗೂ ಇನ್ನೊಂದರಲ್ಲಿ ಬರೀ ಶೇ.18 ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಅದೇ ರೀತಿ, ಅಶೋಕ ಸಂಜೀವಿನಿಯಲ್ಲಿ ಶೇ.60, ಸಹ್ಯಾದ್ರಿ ನಾರಾಯಣ ಹೃದಯಾಲಯ ಶೇ.78, ನಂಜಪ್ಪ ಆಸ್ಪತ್ರೆ ಶೇ.81, ಮೆಟ್ರೋ ಯುನೈಟೆಡ್ ಆಸ್ಪತ್ರೆಯಲ್ಲಿ ಶೇ.80, ಮ್ಯಾಕ್ಸ್ ಆಸ್ಪತ್ರೆಯಲ್ಲಿ ಶೇ.20 ರಷ್ಟು ಸಿಬ್ಬಂದಿ ಲಸಿಕೆ ಪಡೆದಿದ್ದಾರೆ.