Breaking news | ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಸ್ಫೋಟದ ಸದ್ದು ಬೆಚ್ಚಿ ಬಿದ್ದ ಜನ, ಎಲ್ಲಿ ಏನಾಗಿದೆ ಇಲ್ಲಿದೆ ಮಾಹಿತಿ

 

 

WhatsApp Image 2021 01 21 at 10.51.15 PM 1ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುರುವಾರ ರಾತ್ರಿ 10.35ರ ಆಸುಪಾಸು ಶಿವಮೊಗ್ಗ ಜಿಲ್ಲಾದ್ಯಂತ ವಿಚಿತ್ರ ಸದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಬೆಚ್ಚಿಬಿದ್ದು ಮನೆಯಿಂದ ಹೊರಗಡೆ ಬಂದಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಶಿವಮೊಗ್ಗ ನಗರ ವ್ಯಾಪ್ತಿಯ ಎಲ್ಲ ಬಡಾವಣೆಗಳು, ಗೋಪಾಳ, ಪುರಲೆ, ಶೆಟ್ಟಿಹಳ್ಳಿ, ತೀರ್ಥಹಳ್ಳಿ, ಶಿಕಾರಿಪುರ, ತ್ಯಾಗರ್ತಿಯ ಮೂರು ಕಡೆ, ಭದ್ರಾವತಿ, ಸಾಗರ, ಹೊಸನಗರ, ಕೂಡ್ಲಿ, ಹಿತ್ತಲ ಹುಣಸೇಕೊಪ್ಪ, ತರಲಘಟ್ಟ, ಈಸೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಒಂದೇ ರೀತಿಯ ಅನುಭವವಾಗಿದೆ.

ಗಾಜು ಪುಡಿ ಪುಡಿ, ರಸ್ತೆ, ಚಾವಣಿ ಬಿರುಕು: ಕೆಲವಡೆಯಂತೂ ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದು, ತಾನಾಗಿಯೇ ಕಿಟಕಿ ಬಾಗಿಲುಗಳು ತೆರೆದುಕೊಂಡಿವೆ. ಕೆಲವೆಡೆ ರಸ್ತೆಗಳು ಬಿರುಕು ಬಿಟ್ಟ ಘಟನೆಯೂ ನಡೆದಿದೆ. ಅಧಿಕಾರಿಗಳು ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ತೀಕ್ಷ್ಣ ಸದ್ದಿನಿಂದ ಜನರು ಬೆಚ್ಚಿಬಿದ್ದಿದ್ದು, ಮನೆಯ ಹೊರಗಡೆಯೇ ಬಂದು ನಿಂತಿದ್ದಾರೆ.

error: Content is protected !!