
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೆಗ್ಗಾನ್ ಆಸ್ಪತ್ರೆ ಆವರಣದ ಜೆನರಿಕ್ ಮಳಿಗೆ ಮೇಲೆ ದಿಢೀರ್ ದಾಳಿ ಮಾಡಲಾಗಿದೆ.
ವೈದ್ಯಕೀಯ ಅಧೀಕ್ಷಕ ಡಾ.ಎಸ್.ಶ್ರೀಧರ್, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ನೇತೃತ್ವದ ತಂಡವು ದಿಢೀರ್ ದಾಳಿ ಮಾಡಿದ್ದು, ಜೆನರಿಕ್ ಹೊರತುಪಡಿಸಿ ಬೇರೆಯ ಔಷಧಿಗಳು ಸಹ ಪತ್ತೆಯಾಗಿವೆ.
READ | ಆಟೋ ಚಾಲಕನಿಗೆ ₹15 ಸಾವಿರ ದಂಡ, ಕಟ್ಟಲು ನಿರಾಕರಿಸಿದ್ದಕ್ಕೆ 10 ದಿನ ಜೈಲು ಶಿಕ್ಷೆ
ಮಳಿಗೆ ಮಾಲೀಕರಿಗೆ ಖಡಕ್ ವಾರ್ನಿಂಗ್
ಜೆನರಿಕ್ ಮಳಿಗೆಯಲ್ಲಿ ಬೇರೆಯ ಔಷಧಗಳನ್ನು ಮಾರಾಟ ಮಾಡಬಾರದು. ಒಂದುವೇಳೆ ಕಂಡುಬಂದರೆ ಔಷಧ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಹೆಚ್ಚಿನ ಪ್ರಮಾಣದಲ್ಲಿ ಜೆನರಿಕ್ ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಲಾಯಿತು.