Milk, Curd rate | ಗ್ರಾಹಕರಿಗೆ ಶಾಕ್, ಇಂದಿನಿಂದ ಹಾಲು, ಮೊಸರಿ‌ನ ದರ ಹೆಚ್ಚಳ, ಕಾರಣವೇನು?, ಕಳೆದ ಸಲ ಯಾವಾಗ ಏರಿಕೆಯಾಗಿತ್ತು ಬೆಲೆ?

milk

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಗುರುವಾರದಿಂದ ಜಾರಿಗೆ ಬರುವಂತೆ ಪ್ರತಿ ಲೀಟರಿಗೆ ₹2 ಹೆಚ್ಚಿಸಲಾಗಿದೆ. ಈ ಮೂಲಕ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಿದೆ.
ಹಲವು ಹಂತದ ಚರ್ಚೆಗಳ ಬಳಿಕ ಕೆಎಂಎಫ್ ಆಡಳಿತ ಮಂಡಳಿ ಬೆಲೆ ಏರಿಕೆ ನಿರ್ಧಾರವನ್ನು ಮಂಡಳಿಯ ಸಭೆಯಲ್ಲಿ ಕೈಗೊಂಡಿದೆ.

READ | 22 ದಿನಗಳ ಪೊಲೀಸ್ ಕಾರ್ಯಾಚರಣೆ, ಕೋಟ್ಯಂತರ ಮೌಲ್ಯದ ಅಡಿಕೆ ಸೀಜ್ 

ನವೆಂಬರ್ 15ರಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರಿಗೆ ₹3 ಹೆಚ್ಚಿಸಿ ಕೆಎಂಎಫ್ ಅಧ್ಯಕ್ಷರು ಆದೇಶಿಸಿದ್ದರು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದಕ್ಕೆ ತಡೆ ಹಾಕಿದ್ದರು. ರೈತರಿಗೆ ಅನ್ಯಾಯವಾಗದಂತೆ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಅದರನ್ವಯ, ಮಂಡಳಿ ಸಭೆಯಲ್ಲಿ ₹2 ಹೆಚ್ಚಿಸಲು ನಿರ್ಧರಿಸಿದ್ದು, ಗುರುವಾರದಿಂದಲೇ ಅನ್ವಯವಾಗಲಿದೆ.
ಈ ಹಿಂದೆ ಯಾವಾಗ ಬೆಲೆ ಹೆಚ್ಚಿಸಲಾಗಿತ್ತು?
ಎರಡು ವರ್ಷ 10 ತಿಂಗಳುಗಳ ಹಿಂದೆ ಹಾಲು, ಮೊಸರಿನ ಬೆಲೆಯನ್ನು ಹೆಚ್ಚಿಸಲಾಗಿತ್ತು. ಆದರೆ, ಇತ್ತೀಚೆಗೆ ಬೆಲೆ ಏರಿಕೆ ಮಾಡಿರಲಿಲ್ಲ. ನಾನಾ ಕಾರಣಗಳಿಂದ ಹಾಲು ಉತ್ಪಾದಕರಿಗೆ ಹೊರೆಯಾಗಿದ್ದು, 15 ಹಾಲು ಒಕ್ಕೂಟಗಳು ಬೆಲೆ ಏರಿಕೆಗೆ ಬೇಡಿಕೆ ಇಟ್ಟಿದ್ದವು.
ಬೆಲೆ ಏರಿಕೆಗೇನು ಕಾರಣ

  • ರಾಸುಗಳ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ
  • ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆ ಜೋಳ, ಅಕ್ಕಿ ತೌಡು, ಹತ್ತಿ ಕಾಳು ಹಿಂಡಿ ಬೆಲೆ ಏರಿಕೆ
  • ಖನಿಜ ಪದಾರ್ಥಗಳ ಬೆಲೆ ಶೇ.30ರಷ್ಟು ಏರಿಕೆ ಕಂಡಿದೆ
  • ಎರಡು ವರ್ಷಗಳ ಹಿಂದೆ ₹18 ಇದ್ದ ಪಶು ಆಹಾರ ಉತ್ಪಾದನಾ ವೆಚ್ಚವು ₹23ಕ್ಕೆ ಹೆಚ್ಚಳವಾಗಿದೆ.
ಪರಿಷ್ಕೃತ ಹಾಲಿನ ದರ
ಹಾಲಿನ ಮಾದರಿ ಪ್ರಸ್ತುತ ಪರಿಷ್ಕೃತ
ಟೋನ್ಡ್ 37 39
ಹೋಮೊಜೆನೈಸ್ಡ್ ಟೋನ್ಡ್ 38 40
ಹೋಮೊಜಿನೈಸ್ಡ್ ಹಸು 42 44
ಸ್ಪೆಷಲ್ 43 45
ಶುಭಂ 43 45
ಹೋಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ 43 45
ಸಮೃದ್ಧಿ 48 50
ಸಂತೃಪ್ತಿ 50 52
ಡಬಲ್ ಟೋನ್ಡ್ 36 38
ಮೊಸರು 45 47

error: Content is protected !!