Election commission | ಚುನಾವಣಾ ಆಯೋಗಕ್ಕೆ ಪತ್ರ ಬರೀತಾರಂತೆ ಕೆ.ಎಸ್.ಈಶ್ವರಪ್ಪ, ಕಾರಣವೇನು?

KS Eshwarappa

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು‌.

READ | ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇದುವರೆಗೆ ಎಷ್ಟು ನಾಮಪತ್ರಗಳು ಸಲ್ಲಿಕೆಯಾಗಿವೆ?

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ಚುನಾವಣಾ ಆಯೋಗದಿಂದ ನೀಡಿರುವ ಚಿಹ್ನೆಗಳು ಒಂದೂ ಸರಿಯಿಲ್ಲ. ಅವುಗಳಿಗೊಂದು ನಿರ್ದಿಷ್ಟ ಅರ್ಥವಿಲ್ಲ. ಹೀಗಾಗಿ, ಮುಂದಿನ ಚುನಾವಣೆಗಳಲ್ಲಾದರೂ ಜನರ ಅಭಿಪ್ರಾಯ ಸಂಗ್ರಹಿಸಿ ಚಿಹ್ನೆ ಸಿದ್ಧಪಡಿಸಬೇಕು ಎಂದು ಪತ್ರ ಬರೆಯುವುದಾಗಿ ಹೇಳಿದರು.
ಇದುವರೆಗೆ ಚಿಹ್ನ ಆಯ್ಕೆ ಮಾಡಿಲ್ಲ
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಇದುವರೆಗೆ ಚಿಹ್ನೆ ಆಯ್ಕೆ ಮಾಡಿಲ್ಲ. ಆಯೋಗದಲ್ಲಿ ಈಗಾಗಲೇ ಕೆಲವು ಚಿಹ್ನೆಗಳಿವೆ. ಅವುಗಳಿಗೆ ಅರ್ಥವೇ ಇಲ್ಲ ಎಂದು ತಿಳಿಸಿದರು.

error: Content is protected !!