Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು?

Vote from Home

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA (ELECTION NEWS): ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಚುನಾವಣೆ ಆಯೋಗವು ಓಟ್ ಫ್ರಮ್ ಹೋಮ್ ಅವಕಾಶ ನೀಡಿದೆ. ಅದರಡಿ ನೋಂದಣಿ ಮಾಡಿಸಿಕೊಂಡವರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದೆ. ಮೊದಲ ದಿನವೇ ಕ್ಷೇತ್ರದ ವ್ಯಾಪ್ತಿಯಲ್ಲಿ ಉತ್ತಮ ಮತದಾನವಾಗಿದೆ.

READ | ಶಿವಮೊಗ್ಗದಲ್ಲಿ ಎಷ್ಟು ನಾಮಪತ್ರ ತಿರಸ್ಕಾರಗೊಂಡಿವೆ?

ಎಷ್ಟು ಪ್ರಮಾಣದ ಮತದಾನ?
ಒಟ್ಟು 2515 ವಿಕಲಚೇತನರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 1121 ಜನ ಮತ ಚಲಾಯಿಸಿದ್ದಾರೆ. ಶೇ.44.57ರಷ್ಟು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಒಟ್ಟು 1064 ವಿಕಲಚೇತನರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 572 (ಶೇ.53.76) ಜನ ಮತ ಚಲಾಯಿಸಿದ್ದಾರೆ.
ಇಂದು ಕೊನೆಯ ದಿನ
ಮನೆಯಿಂದ ಮತದಾನ ಮಾಡಲು ಎರಡು ದಿನ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಶುಕ್ರವಾರ ಕೊನೆಯ ದಿನವಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮತದಾನ?
ಭದ್ರಾವತಿ- ಶೇ.83.63
ಸಾಗರ- ಶೇ.43.800
ಶಿಕಾರಿಪುರ- ಶೇ.96.03
ಶಿವಮೊಗ್ಗ- ಶೇ.88.61
ಶಿವಮೊಗ್ಗ ಗ್ರಾಮಾಂತರ- 95.97
ಸೊರಬ- ಶೇ.54.13
ತೀರ್ಥಹಳ್ಳಿ- ಶೇ.65.17
ಬೈಂದೂರು- ಶೇ.00

one click many news logo

error: Content is protected !!