ಸುದ್ದಿ ಕಣಜ.ಕಾಂ
ಬೆಂಗಳೂರು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನೆಡುತೋಪು ಅಧೀಕ್ಷಕರು, ಸಹಾಯಕ ನೆಡುತೋಪು ಅಧೀಕ್ಷಕರು ಹಾಗೂ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಐದು ವರ್ಷಗಳ ಬಳಿಕ ಕಾಲ ಕೂಡಿಬಂದಿದೆ.
ಇದನ್ನೂ ಓದಿ । ಪ್ಯಾಸೆಂಜರ್ ಕಡೆ 5 ರೂ. ನೋಟು ಪಡೆಯಲು ನಿರಾಕರಿಸಿದ್ದ ಕಂಡಕ್ಟರ್, ಸಂಬಳದಲ್ಲಿ 1 ಸಾವಿರ ಕಟ್!
ತಿದ್ದುಪಡಿ ಮಾಡಲಾಗಿತ್ತು: ಅಧಿಸೂಚನೆ ಹೊರಡಿಸಿದ ಎರಡು ವರ್ಷಗಳ ನಂತರ ಅಂದರೆ 2018ನೇ ಸಾಲಿನಲ್ಲಿ ತಿದ್ದುಪಡಿಯೊಂದಿಗೆ ಹುದ್ದೆಗಳ ಸಂಖ್ಯೆ ಇಳಿಕೆ ಮಾಡಲಾಗಿತ್ತು. ಬಳಿಕ ನೇಮಕಾತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಷ್ಟೊತ್ತಿಗೆ ಕೋವಿಡ್ ನಿಂದಾಗಿ ಆರ್ಥಿಕ ಇಲಾಖೆ ನೇಮಕಾತಿಗೆ ತಡೆ ಹಿಡಿದಿತ್ತು. ಈಗ ಮರು ಒಪ್ಪಿಗೆ ನೀಡಿದ್ದರಿಂದ ಅಭ್ಯರ್ಥಿಗಳ ಮೊಗದಲ್ಲಿ ನಗೆ ಮೂಡಿದೆ.