ಪಾಲಿಕೆ ಇತಿಹಾಸದಲ್ಲೇ ಇದು ಮೊದಲ ದಂಡ ಪ್ರಕರಣ! ಎಷ್ಟು ಬಿತ್ತು ದಂಡ ಇಲ್ಲಿದೆ ಮಾಹಿತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ಇತಿಹಾಸದಲ್ಲಿಯೇ ಇದು ಮೊದಲ ದಂಡ ಪ್ರಕರಣವಾಗಿದೆ. ಇದುವರೆಗೆ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲಾಗಿದೆ. ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಇದುವರೆಗೆ ದಂಡ ವಿಧಿಸಿರಲಿಲ್ಲ.
WhatsApp Image 2021 01 27 at 8.20.47 PM 1ಬುಧವಾರ ಸಂಜೆ ನಗರದ ಸವಳಂಗ ರಸ್ತೆಯಲ್ಲಿನ ಹೋಟೆಲ್ ಹಾಗೂ ಗಾಂಧಿ ನಗರದಲ್ಲಿರುವ ವಿಧಾತ್ರಿ ಭವನದಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ಗಳನ್ನು ವಶಕ್ಕೆ ಪಡೆದಿರುವ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ತಲಾ 5 ಸಾವಿರ ರೂಪಾಯಿ ಸೇರಿ ಒಟ್ಟು 10 ಸಾವಿರ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ । GOOD NEWS | 5 ವರ್ಷಗಳ ಬಳಿಕ ಉದ್ಯೋಗ ನೇಮಕಾತಿಗೆ ಕೂಡಿಬಂದ ಕಾಲ, ಯಾವ ಇಲಾಖೆ ಇಲ್ಲಿದೆ ಮಾಹಿತಿ

ಕಳೆದ ಹಲವು ವರ್ಷಗಳಿಂದ ಗಾಂಧಿ ಬಜಾರ್ ಸೇರಿದಂತೆ ನಾನಾ ಹೋಟೆಲ್, ಅಂಗಡಿಗಳ ಮೇಲೆ ಪಾಲಿಕೆಯಿಂದ ದಾಳಿ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗುತ್ತಿದೆ. ಆದರೆ, ಇದುವರೆಗೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನು ಮನಗಂಡ ಪಾಲಿಕೆ ದಂಡ ಪ್ರಯೋಗಕ್ಕೆ ಮುಂದಾಗಿದೆ.

ಬುಧವಾರ ಎರಡು ಕಡೆ ನಡೆಸಲಾದ ದಾಳಿಯಿಲ್ಲಿ ಅಂದಾಜು 50-60 ಕೆಜಿ ಕೆ.ಜಿ ಪ್ಲಾಸ್ಟಿಕ್ ಕವರ್, ಚಮಚ ಸೇರಿದಂತೆ ವಿವಿಧ ಪ್ಲಾಸ್ಟಿಕ್ ಜಪ್ತಿ ಮಾಡಲಾಗಿದೆ.
ಮುಂದುವರಿಯಲಿದೆ ಕಾರ್ಯಾಚರಣೆ | ಕೋವಿಡ್ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆಯ ಕಡೆಗೆ ಪಾಲಿಕೆ ಹೆಚ್ಚು ಒತ್ತು ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮತ್ತೆ ಮೈ ಕೊಡವಿ ನಿಂತಿರುವ ಪಾಲಿಕೆ ಬೈಲಾ ಪ್ರಕಾರ ದಂಡ ವಿಧಿಸುತ್ತಿದೆ. ಇದು ನಿತ್ಯವೂ ನಡೆಯಲಿದೆ ಎಂದು ಪಾಲಿಕೆ ಅಧಿಕೃತ ಮೂಲಗಳು ಸುದ್ದಿ ಕಣಜಕ್ಕೆ ತಿಳಿಸಿವೆ.

error: Content is protected !!