ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಮರ್ಡರ್, ಇಬ್ಬರು ರೌಡಿಶೀಟರ್ ಸೇರಿ ನಾಲ್ವರು ಅಂದರ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸುಂದರಾಶ್ರಯ ಬಾರ್ ಎದುರು ಬುಧವಾರ ರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ರೌಡಿಶೀಟರ್ ಗಳಾದ ಆದಿಲ್ ಪಾಷಾ (27), ಪ್ರತಾಪ್(24) ಹಾಗೂ ಅವರೊಂದಿಗಿದ್ದ ಮಹಮದ್ ಸಮೀರ್(21), ಸಕ್ಲೈನ್ ಮುಸ್ತಾಕ್ (21) ಬಂಧಿತರು.

ಇದನ್ನೂ ಓದಿ । ಚಾಕುವಿನಿಂದ ಇರಿದು ಯುವಕನ ಕೊಲೆ, ಇನ್ನೊಬ್ಬನ ಸ್ಥಿತಿ ಗಂಭೀರ, ಎಲ್ಲಿ ನಡೀತು ಘಟನೆ

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬಳಿಕ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದು ಯುವಕನೊಬ್ಬನ ಕೊಲೆ ಮಾಡಲಾಗಿದೆ ಎಂದು ಹೇಳಿದರು.

ಯಾರ ಕೊಲೆ, ಹೇಗೆ: ಬುಧವಾರ ತಡರಾತ್ರಿ ಕೆ.ಆರ್. ಪುರಂ ನಿವಾಸಿ ಜೀವನ್ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆತನೊಂದಿಗಿದ್ದ ಸಿಗೇಹಟ್ಟಿ ನಿವಾಸಿ ಕೇಶವ್ ಎಂಬುವವರ ಮೇಲೆ ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಗುಂಪಿನಲ್ಲಿ 8ರಿಂದ 9 ಜನ ಇದ್ದರೆಂದು ತಿಳಿದುಬಂದಿದ್ದು, ಉಳಿದವರ ಹುಡುಕಾಟ ನಡೆದಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ. ಎಚ್.ಟಿ. ಶೇಖರ್ ಇದ್ದರು.

error: Content is protected !!