ಸುದ್ದಿ ಕಣಜ.ಕಾಂ | DISTRICT | 29 OCT 2022
ಶಿವಮೊಗ್ಗ: ತಾಲೂಕಿನ ಚೋರಡಿ (choradi) ಗ್ರಾಮದ ಬಳಿ ಬಸ್, ಆಟೋ ಮತ್ತು ಬೈಕ್‍ಗಳ ನಡುವೆ ಸರಣಿ ಅಪಘಾತ (accident) ಸಂಭವಿಸಿದೆ.
ಸಾರಿಗೆ ಸಂಸ್ಥೆಯ ಬಸ್‍ವೊಂದು ಆಟೋಗೆ ಡಿಕ್ಕಿ ಹೊಡೆದ್ದಿದ್ದು, ನಂತರ ಆಟೋ ಮೇಲೆ ಹತ್ತಿದ್ದು ಅಪಘಾತವನ್ನು ಕಂಡ ಜನ ತಬ್ಬಿಬ್ಬಾಗಿದ್ದಾರೆ.
READ | ಸೊರಬದಲ್ಲಿ ಹೋರಿ ತಿವಿದು ಯುವಕನ ಸಾವು
ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ (KSRTC) ಬಸ್ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಘಟನೆ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಸಾವುಗಳು ಸಂಭವಿಸಿಲ್ಲ.
ಸಹಾಯಕ್ಕೆ ಧಾವಿಸಿದ ಪೊಲೀಸ್
ಬಸ್, ಆಟೋ ಮತ್ತು ಬೈಕ್’ಗಳ ಮಧ್ಯೆ ಸರಣಿ ಅಪಘಾತ ಆಗಿರುವ ಬಗ್ಗೆ 112 ಇಆರ್‍ಎಸ್‍ಎಸ್ (ERSS) ಸಹಾಯವಾಣಿ (helpline)ಗೆ ಕರೆ ಬಂದ್ದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಕುಂಸಿ (Kumsi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/10/29/eye-donated-by-parents-at-rippanpete/