ಬಂಜಾರ ಧರ್ಮಗುರುಗಳ ಸಾನ್ನಿಧ್ಯ ನಡೆಯಲಿದೆ ಪ್ರಮುಖ ಕಾರ್ಯಕ್ರಮ, ಬಂಜಾರ ರತ್ನ ಪ್ರಶಸ್ತಿ ಪ್ರದಾನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದಿಂದ ಜನವರಿ 31 ರಂದು ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಅಭಿನಂದನೆ, ವಿಚಾರ ಸಂಕಿರಣ ಹಾಗೂ ಯುವ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ.ಈ.ಟಿ.ಪುಟ್ಟಯ್ಯ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಭಾಗವಹಿಸಲಿರುವ ಧರ್ಮಗುರುಗಳು | ಕಲಬುರಗಿಯ ಬಳಿರಾಮ ಮಹರಾಜರು, ಲಿಂಗಸೂರಿನ ಸಿದ್ಧಲಿಂಗ ಮಹಾಸ್ವಾಮಿಗಳು, ಹುಬ್ಬಳ್ಳಿಯ ತಿಪ್ಪೇಶ್ವರ ಮಹಾಸ್ವಾಮಿಗಳು, ವಿಜಯಪುರದ ಜಗನ್ ಮಹಾರಾಜರು, ಕುಂಚೇನಹಳ್ಳಿಯ ನಾಗರಾಜ್ ಮಹಾರಾಜರು, ಹಾವೇರಿಯ ಕುಮಾರ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ.
ಸಂವಾದ, ವಿಚಾರ ಸಂಕಿರಣ | ಖ್ಯಾತ ಹೃದ್ರೋಗ ತಜ್ಞ ಡಾ.ಗಿರೀಶ್ ಅವರು ಯುವ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಡಾ.ರಾಜ ನಾಯ್ಕ್, ಹೈಕೋರ್ಟ್ ವಕೀಲ ಅನಂತ್‍ನಾಗ್ ಅವರು ಅಂದು ಆಯೋಜಿಸಿರುವ ವಿಚಾರ ಸಂಕೀರ್ಣದಲ್ಲ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ | ಮಧ್ಯಾಹ್ನ 2.45 ಗಂಟೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸುವರು. ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಮತ್ತಿತರರು ಭಾಗವಹಿಸಲಿದ್ದಾರೆ.
ಬಂಜಾರ ರತ್ನ ಪ್ರಶಸ್ತಿ ಪ್ರದಾನ | ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತಕ್ಕೂ ಹೆಚ್ಚು ಜನರಿಗೆ `ಬಂಜಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಲಂಬಾಣಿ ಸಮುದಾಯದ ನೃತ್ಯ, ಗಾಯನ, ಜಾನಪದ ಗಾಯನ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಎಚ್.ಚೂಡಾ ನಾಯ್ಕ, ಆಯನೂರು ಶಿವಾನಾಯ್ಕ, ಉಷಾ ನಾಯ್ಕ, ಮಂಜುಳಬಾಯಿ, ಮನೋಹರ್ ನಾಯ್ಕ, ಉಮೇಶ್ ಮಹೇಶ್ವರನಾಯ್ಕ ಉಪಸ್ಥಿತರಿದ್ದರು.

error: Content is protected !!