ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರತಿ ದಿನ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಆದರೆ, ಗುರುವಾರ 28 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 8 ಜನ ಮಾತ್ರ ಗುಣಮುಖ ಹೊಂದಿದ್ದಾರೆ.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 59, ಖಾಸಗಿ ಆಸ್ಪತ್ರೆಯಲ್ಲಿ 11, ಕೋವಿಡ್ ಕೇರ್ ಸೆಂಟರ್ ನಲ್ಲಿ 00, ಹೋಂ ಐಸೋಲೇಷನ್ ನಲ್ಲಿ 61 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯಿಂದ ಇಂದೂ ಯಾರು ಮೃತಪಟ್ಟಿಲ್ಲ. ಇಲ್ಲಿಯವರೆಗೆ ಒಟ್ಟು 348 ಜನರನ್ನು ಕೊರೊನಾ ಬಲಿ ಪಡೆದಿದೆ. ಗಂಟಲು ದ್ರವ ಸಂಗ್ರಹಿಸುವ ಕಾರ್ಯ ಭರದಿಂದ ಸಾಗಿದ್ದು, ಇಂದು 2111 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 2691 ವರದಿ ನೆಗೆಟಿವ್ ಬಂದಿದೆ.
ತಾಲೂಕುರುವಾರು ವರದಿ: ಶಿವಮೊಗ್ಗದಲ್ಲಿ 15, ಭದ್ರಾವತಿ 6, ಶಿಕಾರಿಪುರ 5, ತೀರ್ಥಹಳ್ಳಿ 0, ಸೊರಬ 2, ಹೊಸನಗರ 0 ಪ್ರಕರಣ ದೃಢಪಟ್ಟಿವೆ.