ದೇವಸ್ಥಾನದಲ್ಲಿ ಬೆಲೆಬಾಳುವ ವಸ್ತು ಕದ್ದಿದ್ದ ಖದೀಮರು ಅಂದರ್

 

 

ಸುದ್ದಿ ಕಣಜ.ಕಾಂ
ಸಾಗರ: ದೇವಸ್ಥಾನದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರ ಬಡಾವಣೆಯ ಭದ್ರಾಕಾಳಿ ಮತ್ತು ಕಾಲಭೈರವ ದೇವಸ್ಥಾನದಲ್ಲಿ ನಗದು, ದೇವರ ಪೂಜಾ ಸಾಮಗ್ರಿ ಮತ್ತಿತರ ವಸ್ತುಗಳನ್ನು ಕಳವು ಮಾಡಲಾಗಿತ್ತು.

ಇದನ್ನೂ ಓದಿ । ವೃದ್ಧ ಆತ್ಮಹತ್ಯೆಗೆ ಶರಣು

ಬಂಧಿತರು | ಶಿವಕುಮಾರ್(30), ರಾಮು (50) ಎಂಬುವವರನ್ನು ಬಂಧಿಸಲಾಗಿದೆ. ದೇವಿಗೆ ಹಾಕಿದ್ದ 10 ಗ್ರಾಂ ಚಿನ್ನದ ಸರ, ಪೂಜಾ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

error: Content is protected !!