ಸೂಡ ನಿವೇಶನ ಪಡೆದವರು ಈಗಿರುವ ವಿಳಾಸ ನೀಡಲು ಅವಕಾಶ, ಅಂತಿಮ ದಿನ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ(ಸೂಡ)ದಿಂದ ಮಲ್ಲಿಗೇನಹಳ್ಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಪಡೆದವರು ಹೊಸ ವಿಳಾಸದಲ್ಲಿ ವಾಸಿಸುತ್ತಿದ್ದಲ್ಲಿ ಮಾಹಿತಿ ನೀಡತಕ್ಕದ್ದು.
ಫೆ.22 ಅಂತಿಮ ದಿನ | ನಿವೇಶನ ಹಂಚಿಕೆದಾರರು ನಿವೇಶನ ಅರ್ಜಿಯಲ್ಲಿ ನಮೂದಿಸಿದ ವಿಳಾಸ ಬದಲಾವಣೆಯಾಗಿದ್ದಲ್ಲಿ ಈಗ ವಾಸವಿರುವ ಸಂಪೂರ್ಣ ಅಂಚೆ ವಿಳಾಸವನ್ನು ನಿವೇಶನದ ಮಂಜೂರಾತಿ ದಾಖಲೆಯ ಪ್ರತಿಯೊಂದಿಗೆ ಫೆಬ್ರವರಿ 22ರೊಳಗಾಗಿ ಲಿಖಿತ ರೂಪದಲ್ಲಿ ಪ್ರಾಧಿಕಾರದ ಕಚೇರಿಗೆ ಸಲ್ಲಿಸುವುದು. ತಪ್ಪಿದ್ದಲ್ಲಿ ತಮ್ಮ ವಿಳಾಸ ಬದಲಾವಣೆ ಆಗಿಲ್ಲವೆಂದು ತಿಳಿದು, ಮುಂದಿನ ಪತ್ರ ವ್ಯವಹಾರವನ್ನು ಈ ಹಿಂದೆ ನೀಡಿದ ವಿಳಾಸವನ್ನೇ ಪರಿಗಣಿಸಲಾಗುವುದೆಂದು ಸೂಡ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಪ್ರಾಧಿಕಾರದ ವೆಬ್ ಸೈಟ್ http://www.shivamogga.uda.gov.in, ಇ-ಮೇಲ್ sudashivamogga@gmail.com ಅಥವಾ ದೂರವಾಣಿ ಸಂಖ್ಯೆ 08182 249867 ಸಂಪರ್ಕಿಸುವುದು.

error: Content is protected !!