ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ರೈಲ್ವೆ ಇತಿಹಾಸದಲ್ಲಿ ಇನ್ನೊಂದು ಅಧ್ಯಾಯ ಸೃಷ್ಟಿಯಾಗಿದೆ!
ತಾಳಗುಪ್ಪ ರೈಲು ನಿಲ್ದಾಣದಿಂದ ಇನ್ಮುಂದೆ ಪ್ಯಾಸೆಂಜರ್ ಮಾತ್ರವಲ್ಲದೇ ಪಾರ್ಸೆಲ್ ಸೇವೆ ಕೂಡ ಲಭ್ಯವಾಗಲಿದೆ. ಇದು ಮಲೆನಾಡಿನ ವಾಣಿಜ್ಯ, ಉದ್ಯಮಗಳಿಗೆ ಜೀವಕಳೆ ತುಂಬಲಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಮಂಜುನಾಥ್ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, 9 ಸಾವಿರಕ್ಕಿಂತ ಅಧಿಕ ರೈಲುಗಳಲ್ಲಿ ಪಾರ್ಸೆಲ್ ಸೇವೆ ಲಭ್ಯವಿದೆ. ಜತೆಗೆ, ದೇಶದಲ್ಲಿ ಒಟ್ಟು 750ಕ್ಕೂ ಹೆಚ್ಚು ಸ್ಟೇಷನ್ ಪಾರ್ಸೆಲ್ ಕಚೇರಿಗಳಿವೆ. ಈ ಪಟ್ಟಿಗೆ ತಾಳಗುಪ್ಪ ಸಹ ಸೇರ್ಪಡೆಯಾಗಲಿದೆ.
ಯಾವ ರೈಲಲ್ಲಿ ಸೇವೆ ಲಭ್ಯ?
- ರೈಲು ಸಂಖ್ಯೆ 06529/ 06530 ಕೆ.ಎಸ್.ಆರ್ ಬೆಂಗಳೂರು- ತಾಳಗುಪ್ಪ-ಕೆ.ಎಸ್.ಆರ್.ಬೆಂಗಳೂರು (ಪ್ರತಿದಿನ)
- ರೈಲು ಸಂಖ್ಯೆ 06227/ 06228 ಮೈಸೂರು- ತಾಳಗುಪ್ಪ-ಮೈಸೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ (ಪ್ರತಿದಿನ)
- ರೈಲು ಸಂಖ್ಯೆ 06295/ 06296 ಮೈಸೂರು- ತಾಳಗುಪ್ಪ- ಮೈಸೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ (ಪ್ರತಿದಿನ)
ಏನೇನು ಸೇವೆ | ಹಣ್ಣು, ತರಕಾರಿ, ಆಹಾರ ಧಾನ್ಯ, ಮೀನು, ಪೌಲ್ಟ್ರಿ, ವಿದ್ಯುತ್ ಉಪಕರಣ, ಸೈಕಲ್, ಮೋಟರ್ ಸೈಕಲ್, ರಿಕ್ಷಾ, ಮೆಷಿನರಿ, ಔಷಧ, ಗೃಹಪಯೋಗಿ ವಸ್ತುಗಳು ಇತ್ಯಾದಿ.