ಸುದ್ದಿ ಕಣಜ.ಕಾಂ
ಶಿವಮೊಗ್ಗ: ಉಂಬ್ಳೇಬೈಲು ಅರಣ್ಯ ಪ್ರದೇಶದಲ್ಲಿ ಮತ್ತೆ ಒಂಟಿ ಸಲಗ ದಾಂಧಲೆ ಶುರು ಮಾಡಿದೆ. ಸೋಮವಾರ ರಾತ್ರಿ ಹಾಲ್ ಲಕ್ಕವಳ್ಳಿ ಹಾಗೂ ಮಂಗಳವಾರ ಕೈದೊಟ್ಲು ಗ್ರಾಮದಲ್ಲಿ ಅಡಕೆ, ತೆಂಗಿನ ಮರಗಳಿಗೆ ಹಾನಿ ಮಾಡಿದೆ. ಹೀಗಾಗಿ, ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಹಿಂದೆ ಕಾರ್ಯಚರಣೆ ಮೂಲಕ ನರಸಿಂಹರಾಜಪುರ ರಸ್ತೆಯಲ್ಲಿ ಕಾಕನಹಸೂಡಿವರೆಗೆ ಓಡಿಸಲಾಗಿರುವ ಮೂರು (ಗಂಡು, ಹೆಣ್ಣು ಮತ್ತು ಮರಿ)ಆನೆಗಳಿದ್ದವು. ಆದರೆ, ಈಗ ಕಾಣಿಸಿಕೊಂಡಿರುವುದು ಒಂಟಿ ಸಲಗವಿದ್ದು, ವಯಸ್ಸು ಅದಕ್ಕಿಂತ ಕಡಿಮೆ ಇದೆ ಎಂದು ತಿಳಿದುಬಂದಿದೆ.