SHIKARIPURA | ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭುಗಿಲೆದ್ದ ಬಣ ರಾಜಕೀಯ, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ಬಣ ರಾಜಕೀಯ ಗ್ರಾಮ ಪಂಚಾಯಿತಿಗೂ ಒಕ್ಕರಿಸಿಕೊಂಡಿದೆ. ಹೊಸೂರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಸದಸ್ಯರ ನಡುವೆ ಬಣ ರಾಜಕೀಯ ಭುಗಿಲೆದ್ದು ಚುನಾವಣೆಯನ್ನೇ ಪ್ರಕ್ರಿಯೆಯನ್ನೇ ಮುಂದೂಡಲಾಗಿದೆ.
ಹೊಸೂರು ಪಂಚಾಯಿತಿಯಲ್ಲಿ 11 ಸದಸ್ಯ ಬಲವಿದ್ದು, ಲಕ್ಷ್ಮಿ ಕರಿಬಸಪ್ಪ ಮತ್ತು ಹನುಮಕ್ಕ ಅವರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದರು. ಲಕ್ಷ್ಮಿ 6 ಹಾಗೂ ಹನುಮಕ್ಕ 5 ಮತಗಳನ್ನು ಪಡೆದರು. ಅಧಿಕ ಮತ ಪಡೆದವರ ಹೆಸರು ಘೋಷಿಸುತ್ತಿದ್ದಂತೆಯೇ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ, ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಇದನ್ನೂ ಓದಿ । ಹತ್ತು ಮಹಾನಗರ ಪಾಲಿಕೆಗಳ ಮೀಸಲು ಪ್ರಕಟ, ಯಾವ ಪಾಲಿಕೆಗೆ ಯಾವ ಕೆಟಗರಿ, ಇಲ್ಲಿದೆ ಮಾಹಿತಿ

ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ | ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನೇನು ನಡೆಯಬೇಕು. ಅಷ್ಟರಲ್ಲಿಯೇ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲವಿದೆ. ಚುನಾವಣೆ ಸರಿಯಾಗಿ ನಡೆದಿಲ್ಲ ಎಂದು ಆಪಾದಿಸಿದರು. ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಚುನಾವಣೆ ಪ್ರಕ್ರಿಯೆಗೆ ಸಹಕರಿಸುವಂತೆ ಕೋರಿದರು. ಇದ್ಯಾವುದನ್ನೂ ಕೇಳದ ಆರು ಸದಸ್ಯರು ಸಭೆಯಿಂದ ಹೊರನಡೆದರು. ಕೋರಂ ಕೊರತೆಯಿಂದಾಗಿ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಫೆಬ್ರವರಿ 13ಕ್ಕೆ ಮುಂದೂಡಲಾಯಿತು.

ಏನಿದು ಬಣ ರಾಜಕೀಯ | ಒಟ್ಟು 11 ಸ್ಥಾನಗಳಲ್ಲಿ ಏಳು ಬಿಜೆಪಿ ಬೆಂಬಲಿತ, ನಾಲ್ಕು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಒಂದು ಬಣ ಹನುಮಕ್ಕನವರ ಆಯ್ಕೆಗೆ ನಿರ್ಣಯಕೈಗೊಂಡಿದ್ದಾರೆ. ಅದರ ಮಧ್ಯೆ ಈ ಹಿಂದೆ ಕಾಂಗ್ರೆಸ್ ಬೆಂಬಲಿತರಾಗಿದ್ದ ಕರಿಬಸಮ್ಮ ಆಯ್ಕೆಯಾಗಿದ್ದು, ಯಾವ ಸದಸ್ಯರು ಅವರಿಗೆ ಬೆಂಬಲಿಸಿದ್ದಾರೆಂಬ ಅನುಮಾನ ಭುಗಿಲೆದ್ದು ಸಭೆಯಲ್ಲಿ ಗೊಂದಲ ಮನೆ ಮಾಡಿತು.

error: Content is protected !!