ಶಿವಮೊಗ್ಗದ ಹಳ್ಳಿಯೊಂದನ್ನು ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಿಚ್ಚ ಸುದೀಪ್ ಅವರು ಸಾಗರ ತಾಲೂಕಿನ ಆವಿಗೆ ಗ್ರಾಮವನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಈ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ । ಒಂದು ದಿನ ಟೀಚರ್ ಆದ ಡಿಸಿ!

ಅಭಿನಯ ಮಾತ್ರವಲ್ಲದೇ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಸುದೀಪ್ ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದರು. ಈಗ ಆವಿಗೆ ಗ್ರಾಮವನ್ನು ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೂಲಕ ದತ್ತು ಪಡೆಯಿದ್ದಾರೆ. ಆಡಳಿತ ಮಂಡಳಿ ಹಾಗೂ ಸರ್ಕಾರದಿಂದ ಅನುಮತಿ ಕೂಡ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಇದೊಂದು ಪುಟ್ಟ ಹಳ್ಳಿ | ಶರಾವತಿ ಹಿನ್ನೀರು ಪ್ರದೇಶದಲ್ಲಿರುವ ಆವಿಗೆ ಗ್ರಾಮದಲ್ಲಿ 27 ಮನೆಗಳಿವೆ. ಐದನೇ ತರಗತಿಯವರೆಗೆ ಶಾಲೆ ಇದೆ. ಸೊಸೈಟಿ ಸದಸ್ಯರು ಶಾಲೆಯನ್ನು ದತ್ತು ಪಡೆಯುವ ಉದ್ದೇಶದಿಂದ ಗ್ರಾಮಕೆಕ ಭೇಟಿ ನೀಡಿದಾಗ ಹಳ್ಳಿಯ ದೈನೇಸಿ ಸ್ಥಿತಿ ನೋಡಿ ಇಡೀ ಗ್ರಾಮವನ್ನು ಕಿಚ್ಚ ದತ್ತು ಪಡೆಯಲು ಮುಂದಾಗಿದ್ದಾರೆ.

error: Content is protected !!