ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ 1.43 ಲಕ್ಷ ಟೋಪಿ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೌನ್ ಬನೇಗಾ ಕರೋಡ್ ಪತಿ ಕಂಪೆನಿಯಿಂದ ಫೋನ್ ಮಾಡಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂಪಾಯಿ ಟೋಪಿ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ |ಶಿವಮೊಗ್ಗದ ಹಳ್ಳಿಯೊಂದನ್ನು ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 

ತೀರ್ಥಹಳ್ಳಿಯ ಅನಂತ್ ಕುಮಾರ್ ಎಂಬುವವರೇ ಮೋಸ ಹೋದ ವ್ಯಕ್ತಿ.
25 ಲಕ್ಷ ರೂಪಾಯಿ ಲಕ್ಕಿ ಡ್ರಾ ಬಂದಿರುವುದಾಗಿ ನಂಬಿಸಿ ಹಂತ ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 1.43 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ. ಇದು ಗಮನಕ್ಕೆ ಬಂದಿದ್ದೇ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!