ನಮ್ಮ ಹಳ್ಳಿ ಥಿಯೇಟರ್ | ಸ್ತ್ರೀ ನಾಟಕ ಪ್ರದರ್ಶನ, ಟಿಕೆಟ್‍ಗಾಗಿ ಸಂಪರ್ಕಿಸಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಫೆಬ್ರವರಿ 28ರಂದು ಸಂಜೆ 6.15ಕ್ಕೆ ನಮ್ಮ ಹಳ್ಳಿ ಥಿಯೇಟರ್ ವತಿಯಿಂದ ‘ಸ್ತ್ರೀ’ ನಾಟಕ ಪ್ರದರ್ಶನ ನಡೆಯಲಿದೆ. ಜತೆಗೆ, 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ನಮ್ಮ ಹಳ್ಳಿ ಥಿಯೇಟರ್ ಅಧ್ಯಕ್ಷ ಚೇತನ್ ಸಿ. ರಾಯನಹಳ್ಳಿ, ಎಸ್.ಎನ್.ಸೇತುರಾಮ್ ಅವರು ರಚಿಸಿರುವ ಸ್ತ್ರೀ ನಾಟಕ ಪ್ರದರ್ಶನ ಮಾಡಲಾಗುವುದು ಎಂದರು.
ಟಿಕೆಟ್‍ಗಾಗಿ ಸಂಪರ್ಕಿಸಿ | ನಾಟಕ ವೀಕ್ಷಿಸುವುದಕ್ಕಾಘಿ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ನೆಹರೂ ರಸ್ತೆಯ ರಾಯಲ್ ಕಾಫಿ, ದುರ್ಗಿಗುಡಿಯ ಕಟಿಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ, ಪೆÇಲೀಸ್ ಚೌಕಿಯ ಎಸ್‍ಎಲ್‍ಎನ್ ಸ್ವೀಟ್ಸ್, ಗೋಪಾಳದ ಡಿಜೆ ಫ್ಯಾನ್ಸಿ ವರ್ಡ್, ಜೈಲ್ ರಸ್ತೆಯ ಓಂಮಾರ್ಟ್‍ನಲ್ಲೂ ಟಿಕೆಟ್ ಸಿಗಲಿವೆ. ಮಾಹಿತಿಗೋಸ್ಕರ 9538020367, 9845014229 ಸಂಪರ್ಕಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ । ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಎಂ ಯಡಿಯೂರಪ್ಪ ಹೆಸರಿಡಲು ಆಗ್ರಹ

ಯಾರಿಗೆ ಪ್ರಶಸ್ತಿ 

ಎಸ್.ಎನ್.ಸೇತುರಾಮ್– ರಂಗಸಾಧಕ ಪ್ರಶಸ್ತಿ
ಡಾ.ರಜನಿ ಎ.ಪೈ.– ಸಮಾಜ ಸೇವಕ ಪ್ರಶಸ್ತಿ
ನವೀನ್ ಕಮ್ಮರಡಿ– ಸಾಹಿತಿ ಪ್ರಶಸ್ತಿ
ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಹಾಲಸ್ವಾಮಿ, ನಾಗಶಯನ, ಪ್ರತಿಕ್ ಉಪಸ್ಥಿತರಿದ್ದರು.

error: Content is protected !!