ತಾಯ್ನಾಡಿಗೆ ಮರಳಲಿದ್ದಾರೆ ದಾವಣಗೆರೆ ಮೂಲದ ‘ಕೇರಳಾ ಸಿಂಗಂ’

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಕೇರಳಾದಲ್ಲಿ ಖಡಕ್ ಆಡಳಿತ ನೀಡುವ ಮೂಲಕ ಜನ ಮೆಚ್ಚುಗೆ ಪಡೆದಿರುವ ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ ಜಿ.ಎಚ್.ಯತೀಶ್ ಚಂದ್ರ ತಾಯ್ನಾಡು ಕರ್ನಾಟಕಕ್ಕೆ ವಾಪಸ್ ಬರಲಿದ್ದಾರೆ.

WhatsApp Image 2021 03 04 at 4.28.11 PM 1ದಾವಣಗೆರೆ ಮೂಲದ ಯತೀಶ್ ಚಂದ್ರ ಅವರು ಮುಂದಿನ ವಾರ ಬೆಂಗಳೂರಿನಲ್ಲಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ದಾವಣಗೆರೆಯ ಬಾಪೂಜಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ಸ್ಟೈಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಡಿದರು. ಟೆಕ್ಕಿಯಾಗಿ ಲಕ್ಷಾಂತರ ಹಣ ಗಳಿಸುತ್ತಿದ್ದ ಯತೀಶ್ ಚಂದ್ರ ಅವರು 2010ರ ಯುಪಿಎಸ್.ಸಿ ಪರೀಕ್ಷೆಯಲ್ಲಿ ಪಾಸಾಗಿ ಪೊಲೀಸ್ ಅಧಿಕಾರಿಯಾದರಲ್ಲದೇ ತಮ್ಮ ಕಾರ್ಯವೈಖರಿ ಮೂಲಕ ಖಡಕ್ ಅಧಿಕಾರಿ ಎನಿಸಿಕೊಂಡರು. ಕೇರಳಾ ಸಿಂಗಂ ಎಂಬ ಪಟ್ಟು ಲಭಿಸಿತು.
ಪಕ್ಷ, ವ್ಯಕ್ತಿಯ ವರ್ಚಸ್ಸು ಇದ್ಯಾವುದನ್ನೂ ನೋಡದೇ ಕರ್ತವ್ಯ ನಿರ್ವಹಿಸುವ ಖಡಕ್ ಪೊಲೀಸ್ ಅಧಿಕಾರಿ ಇವರಾಗಿದ್ದು, ಈ ಹಿಂದೆ ಹಲವು ವಿವಾದಗಳಿಗೆ ಸಿಲುಕಿದ್ದರು.

WhatsApp Image 2021 03 07 at 10.32.50 PM
ಸದಾ ಒಂದಿಲ್ಲೊಂದು ಸಂಘರ್ಷಗಳು ನಡೆಯುವ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಕೇರಳಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಿನಿಂದ ಅನುಷ್ಠಾನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

error: Content is protected !!