COURT NEWS | ಸಾಗುವಾನಿ ಕಡಿತಲೆ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಚೋರಡಿ ಗ್ರಾಮದ ಕರಡಿಬೆಟ್ಟದ ಮನ್ನಾ ಕಾಡಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?

ಕಮ್ಮನಹಳ್ಳಿ ನಾಗರಾಜ್ ಎಂಬುವವರೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಸಾಗುವಾನಿ ಮರ ಕಡಿತಲೆ ಮಾಡಿ 37 ತುಂಡುಗಳನ್ನು ಮಾಡಿದ್ದರು. ಆನಂದಪುರಂ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಶಿವಮೊಗ್ಗ ಎರಡನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸರ್ಕಾರದ ಪರ ಮಂಡಿಸಿದ ವಾದವನ್ನು ಪುರಸ್ಕರಿಸಿ ನ್ಯಾಯಾಧೀಶರಾದ ವಿ.ಎಸ್.ಅಂಜಲಿ ಶರ್ಮಾ ಅವರು ಆರೋಪಿಗೆ ಶಿಕ್ಷೆ ನೀಡಿದ್ದಾರೆ.

ಇದನ್ನೂ ಓದಿ | ಭದ್ರಾವತಿ ಶಾಸಕರಿಗೆ ಜಾತಿ ನಿಂದನೆ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು, ಎಷ್ಟು ಜನರಿಗೆ ಸಿಕ್ತು ಬೇಲ್ ಗೊತ್ತಾ?

1 ವರ್ಷ ಸಾದಾ ಸಜೆ ಮತ್ತು 2 ಸಾವಿರ ರೂಪಾಯಿ ದಂಡ, ಸರ್ಕಾರಕ್ಕೆ ಪರಿಹಾರವಾಗಿ 10 ಸಾವಿರ ರೂಪಾಐಇ ವಿಧಿಸಿ ತೀರ್ಪು ನೀಡಲಾಗಿದೆ. ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಕೆ. ಅರುಣ್ ಕುಮಾರ್ ವಾದ ಮಂಡಿಸಿದ್ದರು.

error: Content is protected !!