Vehicle | ಚುನಾವಣೆ ಹಿನ್ನೆಲೆ ವಾಹನ‌ ಮಾಲೀಕರಿಗೆ ಆರ್.ಟಿ.ಓದಿಂದ‌ 6 ಪ್ರಮುಖ ಕಂಡಿಷನ್ಸ್

Auto

 

 

ಸುದ್ದಿ ಕಣಜ.ಕಾಂ‌ ಶಿವಮೊಗ್ಗ
SHIVAMOGGA: 2023ನೇ ಸಾಲಿನ ಸಾರ್ವತ್ರಿಕ ಚುನಾವಣಾ ಅಂಗವಾಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಟೋ ರಿಕ್ಷಾ, ಮ್ಯಾಕ್ಸಿ ಕ್ಯಾಬ್, ಮೋಟಾರ್ ಕ್ಯಾಬ್, ಮೀಟರ್‍ಟ್ಯಾಕ್ಸಿ ವಾಹನಗಳ ಚಾಲಕರು/ ಮಾಲೀಕರುಗಳ ಸಭೆ ನಡೆಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಅವರು ಹಲವು ಸೂಚನೆಗಳನ್ನು ನೀಡಿದ್ದಾರೆ.

READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ‌ ನರೇಂದ್ರ ಮೋದಿ

ನೀಡಲಾದ ಸೂಚನೆಗಳೇನು?

  1. ಯಾವುದೇ ವಾಹನ ಚಾಲಕರುಗಳು ತಮ್ಮ ವಾಹನಗಳ ಪರವಾನಗಿ, ಆರ್‍.ಸಿ, ಎಫ್‍ಸಿ, ಇಟಿಸಿ, ಇನ್ಶೂರೆನ್ಸ್ ಮತ್ತು ಚಾಲಕರು ತಮ್ಮ ವಾಯಿದೆಯುಳ್ಳ ಲೈಸೆನ್ಸ್ ಗಳನ್ನು ಹೊಂದಿದ್ದು ವಾಹನಗಳ ಮೇಲೆ ‘ಬಾಡಿಗೆಗೆ’ ಎಂಬ ಫಲಕಗಳನ್ನು ತಪ್ಪದೇ ಪ್ರದರ್ಶಿಸಿ, ಫೇರ್ ಮೀಟರ್‍ ಗಳನ್ನು ತಪ್ಪದೇ ಅಳವಡಿಸಿಕೊಂಡು ವಾಹನಗಳನ್ನು ಚಲಾಯಿಸಬೇಕು.
  2. ಬಾಡಿಗೆಗಾಗಿ ಪ್ರಯಾಣಿಸುವ ಪ್ರಯಾಣಿಕರ ಬಗ್ಗೆ ಎಚ್ಚರವಾಗಿದ್ದು, ಎಲ್ಲ ಪ್ರಯಾಣಿಕರ ಗುರುತಿನ ಚೀಟಿಯನ್ನು ತಪ್ಪದೇ ತೋರಿಸುವಂತೆ ತಿಳಿಸುವುದು ಮತ್ತು ದಾಖಲು ಮಾಡಿಕೊಳ್ಳುವುದು.
  3. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಮ್ಮ ಗುರುತನ್ನು ಅಥವಾ ಸರಕಿನ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು.
  4. ವಾಹನಗಳಲ್ಲಿ ಯಾವುದೇ ರೀತಿಯ ಅನಧಿಕೃತ ಹಾಗೂ ನಿರ್ಬಂಧಿತ ವಸ್ತುಗಳನ್ನಾಗಲೀ ಹಾಗೂ ಯಾವುದೇ ರೀತಿಯ ಅನುಮಾನಾಸ್ಪದ ಪ್ರಯಾಣಿಕರನ್ನಾಗಲೀ ಸಾಗಿಸುವಂತಿಲ್ಲ.
  5. ವಾಹನಗಳಲ್ಲಿ ಯಾವುದೇ ರೀತಿಯ ಉಡುಗೊಡರೆಗಳನ್ನಾಗಲೀ, ಆಮಿಷ ಒಡ್ಡುವ ಸರಕುಗಳನ್ನಾಗಲೀ, ಮದ್ಯವನ್ನಾಗಲೀ ಸಾಗಿಸುವಂತಿಲ್ಲ.
  6. ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಸೂಕ್ತ ಒಪ್ಪಿಗೆ ವಿನಹ ವಾಹನಗಳ ಮೇಲೆ ಪ್ರದರ್ಶಿಸುವಂತಿಲ್ಲ.

Ayanur manjunath | ಸೋಶಿಯಲ್ ಮೀಡಿಯಾದಲ್ಲಿ‌ ಕೆಟ್ಟ ಕಮೆಂಟ್ ಮಾಡಿದವರಿಗೆ ಲೆಫ್ಟ್-ರೈಟ್ ತೆಗೆದುಕೊಂಡ ಆಯನೂರು

error: Content is protected !!