Rashtriya Raksha University | ರಕ್ಷಾ ವಿವಿಯ ಕ್ಯಾಂಪಸ್ ಉದ್ಘಾಟನೆ, ಏನಿದರ ವಿಶೇಷ, ಯಾವ್ಯಾವ ಕೋರ್ಸ್ ಲಭ್ಯ? ಇದು ದೇಶದಲ್ಲೇ‌ ಎರಡನೇಯದ್ದು

shivamogga city

 

 

ಸುದ್ದಿ‌ ಕಣಜ.ಕಾ‌ಂ ಶಿವಮೊಗ್ಗ
SHIVAMOGGA: ಮಾರ್ಚ್ 24 ರಂದು  ನಗರದ ರಾಗಿಗುಡ್ಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (Rashtriya Raksha University)ದ ಕ್ಯಾಂಪಸ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುಯಲ್ ಮೂಲಕ ಉದ್ಘಾಟಿಸಲಿದ್ದಾರೆ‌ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

READ | ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್, ಯಾವಾಗಿಂದ ಸೇವೆ‌ ಲಭ್ಯ, ಯಾವ ಏರ್ ಲೈನ್ಸ್ ಜತೆ ಒಪ್ಪಂದ?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗಾಗಿ ಮಾನವ ಸಂಪನ್ಮೂಲ ಕೊಡಲು ಶಿವಮೊಗ್ಗದಲ್ಲಿ ದೇಶದಲ್ಲೇ ಎರಡನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆಗುತ್ತಿರುವುದು ಹೆಮ್ಮೆಯ ವಿಷಯ. ಇದರಲ್ಲಿ ಅನೇಕ ವಿಭಾಗಗಳಿದ್ದು, ಡಿಪ್ಲೊಮಾ, ಪಿಜಿ ಹಾಗೂ ಒಂದು ವಾರದ ಕೋರ್ಸ್ ಸೇರಿದಂತೆ ರಕ್ಷಣಾಲಯಕ್ಕೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಅನೇಕ ಕೋರ್ಸ್ ಗಳನ್ನು ಪ್ರಾರಂಭಿಸುತ್ತಿದ್ದು, ಜೂನ್ ಅಥವಾ ಜುಲೈನಿಂದಲೇ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ ಎಂದರು.
ರಾಗಿಗುಡ್ಡದಲ್ಲಿ ಸುಸಜ್ಜಿತ ಕ್ಯಾಂಪಸ್
₹2000 ದಿಂದ ₹55 ಸಾವಿರದವರೆಗೆ ಶುಲ್ಕ ಕೂಡ ಈ ತರಬೇತಿಗೆ ಇದ್ದು, ನವುಲೆಯ ರಾಗಿಗುಡ್ಡದ ಎಂಟು ಎಕರೆ ಜಾಗದಲ್ಲಿ ಅತ್ಯಾಧುನಿಕ ಸುಸಜ್ಜಿತ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದರು.
ಏನೇನು ಕೋರ್ಸ್’ಗಳಿರಲಿವೆ?
ಸೈಬರ್ ಭದ್ರತೆ, ಅಪರಾಧಶಾಸ್ತ್ರ, ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಕಾನೂನು, ರಕ್ಷಣಾ ವಿಷಯಗಳ ಬಗ್ಗೆ ತರಬೇತಿ ಬೇಸಿಕ್ ಕೋರ್ಸ್ ಕೂಡ ಇಲ್ಲಿ ಪಡೆಯಬಹುದು. ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಶಕ್ತಿ ತುಂಬುವ ಉದ್ದೇಶದಿಂದ ಈ ರಕ್ಷಾ ವಿವಿ ಪ್ರಾರಂಭವಾಗಲಿದ್ದು, ದೀರ್ಘಾವಧಿ ಕೋರ್ಸ್ ಮತ್ತು ತರಬೇತಿ ಕೂಡ ಇಲ್ಲಿ ಇರುತ್ತದೆ. ಈ ಸ್ಥಳವನ್ನು ಹಿಂದೆ ಮೊರಾರ್ಜಿ ಶಾಲೆಗೆ ನೀಡಲಾಗಿತ್ತು. ಈಗ ಮೊರಾರ್ಜಿ ಶಾಲೆ ಬೇರೆಡೆಗೆ ಸ್ಥಳಾಂತರವಾಗಿದ್ದರಿಂದ ಅದೇ ಜಾಗದಲ್ಲಿ ಈ ಕೇಂದ್ರ ಪ್ರಾರಂಭವಾಗಲಿದೆ ಎಂದು ಹೇಳಿದರು‌.
ಶಾಸಕರಾದ‌ ಕೆ.ಎಸ್.ಈಶ್ಚರಪ್ಪ, ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ಇ. ಕಾಂತೇಶ್, ಶಿವರಾಜ್, ಜ್ಞಾನೇಶ್ವರ್, ರಾಮಣ್ಣ, ಹೃಷಿಕೇಶ್ ಪೈ. ಇ. ವಿಶ್ವಾಸ್, ಅಣ್ಣಪ್ಪ ಉಪಸ್ಥಿತರಿದ್ದರು.

Mann Ki Baat | ಅಡಿಕೆ ಹಾಳೆಯಿಂದ ಪಾದರಕ್ಷೆ, ಹ್ಯಾಂಡ್ ಬ್ಯಾಗ್, ಅಲಂಕಾರಿ ವಸ್ತುಗಳ ತಯಾರಿಕೆ, ಮನ್ ಕೀ ಬಾತ್‍ನಲ್ಲಿ ಶಿವಮೊಗ್ಗದ ಉದ್ಯಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ

error: Content is protected !!