ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಇದೆ. ಬಡಾವಣೆ ರಸ್ತೆಗಳಲ್ಲೂ ಪೊಲೀಸರು ಗಸ್ತಿನಲ್ಲಿದ್ದು, ವಾಹನ ಸವಾರರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅನಗತ್ಯವಾಗಿ ಓಡಾಡುವ ವಾಹನಗಳನ್ನು ಹಿಡಿದು ಅವರಿಗೆ ದಂಡ ವಿಧಿಸಲಾಗುತಿದ್ದು, ಹಲವು ಬೈಕ್, ಕಾರುಗಳನ್ನು ಸೀಜ್ ಮಾಡಲಾಗುತ್ತಿದೆ.
READ | ಮೇಲ್ಜರ್ಜೆಗೇರಲಿದೆ ಮೆಗ್ಗಾನ್ ಕೋವಿಡ್ ಆಸ್ಪತ್ರೆ, ಹಾಸಿಗೆಗಳ ಸಂಖ್ಯೆ 650ರಿಂದ 1400ಕ್ಕೆ ಏರಿಕೆ, ಇನ್ನೇನು ಲಭ್ಯ?
ಕೊರೊನಾ ಸೋಂಕು ತಡೆ ಹಿನ್ನೆಲೆ ಜಿಲ್ಲಾಡಳಿತ ಒಂದು ವಾರದ ಲಾಕ್ ಡೌನ್ ಘೋಷಿಸಿದ್ದು, ಅನಗತ್ಯವಾಗಿ ಓಡಾಡುವವರಿಗೆ ಖಾಕಿ ಶಾಕ್ ನೀಡುತ್ತಿದೆ.
ಎಲ್ಲೆಲ್ಲಿ ಖಾಕಿ ಪಡೆ | ನಗರದ ಸವಳಂಗ ರಸ್ತೆಯಲ್ಲಿ ಬ್ಯಾರಿಕೆಡ್ ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿದ್ದು, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಅದೇ ರೀತಿ, ಕುವೆಂಪು ರಸ್ತೆ, ಜೈಲು ವೃತ್ತ, ಸಾಗರ ರಸ್ತೆ, ಅಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತ, ಬಿ.ಎಚ್.ರಸ್ತೆ ಹೀಗೆ ಎಲ್ಲೆಡೆ ಬಿಗಿ ಬಂದೋಬಸ್ತ್ ಇದೆ.
ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ನಿಯಮ | ಶಿಕಾರಿಪುರ, ಸಾಗರ, ಶಿರಾಳಕೊಪ್ಪ, ಭದ್ರಾವತಿ, ಶಿವಮೊಗ್ಗ ತಾಲೂಕುಗಳಲ್ಲಿ ಬೆಳಗ್ಗೆಯಿಂದಲೇ ಪೊಲೀಸರ ಬಂದೋಬಸ್ತ್ ಇದೆ.
https://www.suddikanaja.com/2021/05/10/tight-police-security-in-shivamogga/