ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳ. ಸರ್ವಋತು ಪ್ರವಾಸೋದ್ಯಮಕ್ಕೆ ಇಲ್ಲಿ ಅವಕಾಶವಿದೆ. ವರ್ಷವಿಡೀ ಪ್ರವಾಸಿಗಳನ್ನು ತನ್ನತ್ತ ಕೈಬಿಸಿ ಕೆರೆಯುವ ಪಶ್ಚಿಮಘಟ್ಟದ ಹಸಿರು, ಅಲ್ಲಿ ಹುಟ್ಟಿ ಝುಳು ಝುಳು ಹರಿಯುವ ಝರಿ, ಹಳ್ಳ, ಕೊಳ್ಳ, ನದಿಗಳು ಆಕರ್ಷಣೆಯ ಕೇಂದ್ರವಾಗಿವೆ. ಇದೆಲ್ಲದರ ಸೌಂದರ್ಯವನ್ನು ಪ್ರವಾಸಿಗಳಿಗೆ ಬಿತ್ತರಿಸಿ ಅವರನ್ನು ತನ್ನತ್ತ ಸೆಳೆಯಲು ಯುವ ಸಮೂಹ ಮುಂದಾಗಿದೆ.

Girish Gigaಮಲೆನಾಡಿನಲ್ಲಿ ಇದೊಂದು ವಿನೂತನ ಡಿಜಿಟಲ್ ಟೂರಿಸ್‍ಂ ಪ್ಲಾಟ್ ಫಾರ್ಮ್ ಆಗಿದೆ. ಲೋಕಲ್ ನಿಂದ ದೇಶ, ವಿದೇಶಕ್ಕೂ ನಮ್ಮ ಕಂಪೆನಿಯ ವಿವಿಧ ಯೋಜನೆಗಳಡಿ ಟ್ರಿಪ್ ಗೆ ಹೋಗಬಹುದು. ಅದಕ್ಕಾಗಿ ಆಕರ್ಷಕ, ವಿಶೇಷ ಪ್ಯಾಕೇಜ್ ಸಹ ನೀಡಲಾಗಿದೆ. ಪಾಸ್ ಪೋರ್ಟ್ ಮಾಡಿಸಿಕೊಳ್ಳುವುದಕ್ಕೂ ರಿಯಾಯಿತಿ ನೀಡಲಾಗುವುದು. ಕಂಪೆನಿಯ ಸದಸ್ಯರಾದ್ದಲ್ಲಿ ಇನ್ನಷ್ಟು ಸೌಲಭ್ಯ ಸಿಗಲಿವೆ. ಶೀಘ್ರವೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಏಪ್ರಿಲ್ ತಿಂಗಳಲ್ಲಿ ಸೂಪರ್ ಮಾರ್ಕೆಟ್ ಉದ್ಘಾಟಿಸಲಾಗುತ್ತಿದೆ. ಅಲ್ಲಿ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ಖರೀದಿಸಬಹುದು.
– ಕೆ.ಎಲ್.ಗಿರೀಶ್, ಸಂಸ್ಥಾಪಕ ಮತ್ತು ಸಿಇಒ, ಗಿಗಾ ಕಂಪೆನಿ, ಎ.ಎನ್.ಕೆ. ರಸ್ತೆ, ಗಾಂಧಿನಗರ,  ಶಿವಮೊಗ್ಗ

ಮಲೆನಾಡಿನ ಸೌಂದರ್ಯವನ್ನು ದೇಶ ವಿದೇಶದಿಂದ ಬರುವವರಿಗೆ ತಲುವುದಕ್ಕೆ ಡಿಜಿಟಲ್ ವೇದಿಕೆಯನ್ನು ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ `ಒಕಲ್ ಫಾರ್ ಲೋಕಲ್’ಗೆ ಇದು ಪೂರಕವಾಗಿದೆ.
ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಸ್ಥಳೀಯ ಪ್ರವಾಸೋದ್ಯಮವನ್ನೇ ಬಂಡವಾಳವಾಗಿಸಿಕೊಂಡು ನವೋದ್ಯಮಕ್ಕೆ ಕಾಲಿಟ್ಟಿದ್ದು ಸಾಗರದ ಪ್ರತಿಭೆ ಗಿರೀಶ್.
ಸೆಲ್ಫಿ ಕ್ಲಿಕ್ಕಿಸಿ ಕಳುಹಿಸಿ | ಭಾರತ ಸಿನೇಮಾಸ್ ನಲ್ಲಿ ಎಲ್.ಇ.ಡಿ ಸ್ಕ್ರೀನ್ ಅಳವಡಿಸಿದ್ದು, ಎಲ್ಲ ದೇಶಗಳ ಚಿತ್ರಗಳನ್ನು ಅಲ್ಲಿ ಅಳವಡಿಸಲಾಗಿದೆ. ದೇಶ, ವಿದೇಶ ಪ್ರಯಾಣಿಸಲು ಇಚ್ಛಿಸುವವರು ಆ ದೇಶದ ಚಿತ್ರದ ಎದುರು ನಿಂತು ಫೋಟೊ ಕ್ಲಿಕ್ಕಿಸಿ ಕಳುಹಿಸಿದರೆ ಸಾಕು ಅವರಿಗೆ ಆಕರ್ಷಕ ರಿಯಾಯಿತಿ ಮತ್ತು ಆಫರ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ, ಗಿರೀಶ್ 8971159905 ಇಲ್ಲವೇ ವೆಬ್ ಸೈಟ್  http://www.giga-fly.comಗೆ ಸಂಪರ್ಕಿಸಿ.

ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?

ಏನೇನು ಸೌಲಭ್ಯ ಲಭ್ಯ | ಜೀವನ ಬಹುಮುಖ್ಯ ಕ್ಷಣಗಳನ್ನು ಅವಿಸ್ಮರಣೀಯ ಮಾಡುವಲ್ಲಿ ಗಿಗಾ ಕಂಪೆನಿಯೂ ಸಹಕಾರಿಯಾಗಲಿದೆ. ಮಾಲ್ಡೀವ್ಸ್ , ಡೆಲ್ಲಿ , ಶಿಮ್ಲಾ ಮನಾಲಿ , ಊಟಿ ,ಕೊಡೈಕೆನಾಲ್ ,ದಾಂಡೇಲಿ, ಸಕಲೇಶಪುರ ಹೀಗೆ ಮುಂತಾದ ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಪ್ಯಾಕೇಜ್ ಸರ್ವಿಸ್ ಲಭ್ಯವಿದೆ. ಜತೆಗೆ, ಗೋವಾ, ಅಂಡಮಾನ್, ಜೈಪುರ ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಅವಕಾಶವಿದೆ.

GIGA OPENINGಹಾಲಿ ಡೇ ಟ್ರಿಪ್ ನಲ್ಲಿ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್, ಬರ್ತ್ ಡೇ ಪಾರ್ಟೀಸ್, ಎಲ್ಲ ಬಗೆಯ ಸ್ಟೇಜ್ ಮತ್ತು ಮನೆ ಡೆಕೋರೇಷನ್, ಕ್ಯಾಟರಿಂಗ್, ಡಿಜೆ ಸೌಂಡ್, ಲೈಟಿಂಗ್ಸ್ ಜತೆ ಸಿಸ್ಟ್ಂ, ಫೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿ ಮಾಡಲಾಗುವುದು.
ಕ್ಲಬ್ ಮೆಂಬರ್ ಆದ್ದಲ್ಲಿ ಶೇ.5 ರಿಂದ 10ರಷ್ಟು ರಿಯಾಯಿತಿ ನೀಡಲಾಗುವುದು. ಜತೆಗೆ, ಪ್ರಯಾಣದ ವೇಳೆ ಟ್ರಾವೆಲ್ ಬ್ಯಾಗ್, ಫ್ರಿ ಟ್ರಾವೆಲ್ ಇನ್ಶೂರೆನ್ಸ್ ನೀಡಲಾಗುವುದು.
ರಾಬರ್ಟ್ ತೆರೆಯ ದಿನವೇ ಗಿಗಾ ಚಾಲನೆ | ನಗರದ ಸಿಟಿ ಸೆಂಟರ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ಬೃತ್ ತೆರೆಯಲ್ಲಿ ಅತ್ತ ರಾಬರ್ಟ್ ಸಿನಿಮಾ ತೆರೆಕಂಡರೇ ಅದೇ ವೇದಿಕೆಯಲ್ಲಿ ಗಿಗಾ ಕಂಪೆನಿಯನ್ನು ಲೋಕಾರ್ಪಣೆಗೊಂಡಿದೆ.
ಗಿಗಾ ಕಂಪೆನಿಯ ನಿರ್ದೇಶಕ ಕೆ.ಎಲ್.ಗಣಪತಿ ಅವರು ಉದ್ಘಾಟನೆ ಮಾಡಿದ್ದು, ಗಿಗಾ ಕಂಪೆನಿಯ ಸಿಎಂಒ ಬಿ.ಎಂ.ಮನು, ಸಂಸ್ಥಾಪಕ ಮತ್ತು ಸಿಇಒ ಕೆ.ಎಲ್.ಗಿರೀಶ್ ಹಾಗೂ ಕಂಪೆನಿಯ ಕ್ಲಬ್ ಸದಸ್ಯರು, ಫ್ರಾಂಚೈಸಿಗಳು ಈ ವೇಳೆ ಉಪಸ್ಥಿತರಿದ್ದರು.

error: Content is protected !!