‘ಭದ್ರಾವತಿ ಪ್ರಕರಣವನ್ನೇ ತಿರುಚಲು ಹೊರಟಿದೆ ಕೈ’

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನೇ ಕಾಂಗ್ರೆಸ್ ತಿರುಚಲು ಹೊರಟಿದೆ. ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಎಂದು ಭದ್ರಾವತಿ ತಾಲ್ಲೂಕು ಬಿಜೆಪಿ ಮುಖಂಡ ಪ್ರಭಾಕರ್ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ತಿರುಚಿದೆ. ಸತ್ಯ ಮರೆಮಾಚಲಾಗುತ್ತಿದೆ ಎಂದು ಆಪಾದಿಸಿದರು.

ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

ಭದ್ರಾವತಿಯಲ್ಲಿ ಆಯೋಜಿಸಿದ್ದ ಪಂದ್ಯಾವಳಿ ಪಕ್ಷಾತೀತವಾಗಿತ್ತು. ಘಟನೆಯ ಬಗ್ಗೆ ಕಾಂಗ್ರೆಸಿಗರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ.
ಬಿ.ವೈ.ಕೆ. ಸ್ಪೋರ್ಟ್ಸ್ ಕ್ಲಬ್ ಈ ಪಂದ್ಯಾವಳಿ ಆಯೋಜಿಸಿತ್ತು. ಅಲ್ಲಿ ಜೈ ಶ್ರೀರಾಮï, ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂಬ ಘೋಷಣೆ ಕೂಗಿದ್ದಕ್ಕೆ ಕಾಂಗ್ರೆಸ್ ನವರಿಗೇನು ಸಮಸ್ಯೆ? ಅನಗತ್ಯವಾಗಿ ಜಗಳ ತೆಗೆದು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಘಟನೆಯ ವಿಡಿಯೋಗಳನ್ನು ಮಾಧ್ಯಮಗೋಷ್ಠಿಯಲ್ಲಿ ತೋರಿಸಿದರು. ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಪ್ರಕರಣ ಮುಖ್ಯ ಆರೋಪಿಗಳಾಗಿದ್ದಾರೆ ಎಂದು ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ.ಶ್ರೀನಾಥ್, ಶಿವರಾಜು, ಆನಂದ್, ಮಂಗೋಟೆ ರುದ್ರೇಶ್, ಧರ್ಮಪ್ರಸಾದ್ ಉಪಸ್ಥಿತರಿದ್ದರು.

 

error: Content is protected !!