ಸುದ್ದಿ ಕಣಜ.ಕಾಂ | KARNATAKA | ENTERTAINMENT NEWS
ಶಿವಮೊಗ್ಗ: ದಿ.ಪುನೀತ್ ರಾಜ್ಕುಮಾರ್, ವಿಜಯಪ್ರಕಾಶ್, ಸೋನು ನಿಗಮ್ ಹಾಗೂ ಸಂಚಿತ್ ಹೆಗಡೆ ಹಾಡಿರುವ `ಯಲ್ಲೋ ಬೋರ್ಡ್(Yellow Board)’ ಚಿತ್ರ ರಾಜ್ಯದಲ್ಲಿ ಮಾರ್ಚ್ 4ರಂದು ತೆರೆ ಕಾಣಲಿದೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರವು ಕ್ಯಾಬ್ ಚಾಲಕರ ಜೀವನದ ಮೇಲೆ ಆಧಾರವಾಗಿದೆ. ಅವರ ಜೀವನ, ವ್ಯಥೆ ಮತ್ತು ಅನ್ಯಾಯ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ ಎಂದು ಚಿತ್ರದ ನಾಯಕ ನಟ ಪ್ರದೀಪ್ ತಿಳಿಸಿದರು. ಯಲ್ಲೋ ಬೋರ್ಡ್ ಚಿತ್ರವು ತನ್ನ ನಾಯಕತ್ವದ ಎರಡನೇ ಚಿತ್ರವಾಗಿದೆ. ಚಿತ್ರದಲ್ಲಿ ಐದು ಹಾಡುಗಳಿವೆ ಎಂದರು.
READ | ‘ಓಲ್ಡ್ ಮಾಂಕ್’ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ, ಶಿವಮೊಗ್ಗ ಬಗ್ಗೆ ಹೇಳಿದ್ದೇನು?
ಚೊಚ್ಚಲ ನಿರ್ದೇಶನದ ಚಿತ್ರ
ನಿರ್ದೇಶಕ ತ್ರಿಲೋಕ ರೆಡ್ಡಿ ಮಾತನಾಡಿ, ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ವಿವಿಧ ಚಲನಚಿತ್ರಗಳಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಪ್ರೇಕ್ಷಕರು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.
ತಾರಾಗಣದಲ್ಲಿ ಸಾಧುಕೋಕಿಲ, ಅಹಲ್ಯ ಸುರೇಶ್, ಸ್ನೇಹ ಸಿಂಗ್, ಶ್ರಿನಿವಾಸ್ ಬಿಂದಿಹನವಾಲೆ, ಭವಾನಿ ಪ್ರಕಾಶ್ ಇತರರಿದ್ದಾರೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ನವೀನ್ ಕುಮಾರ್, ಆಸಿಫ್ ಉಪಸ್ಥಿತರಿದ್ದರು.
https://www.suddikanaja.com/2021/12/27/ek-love-ya-fifth-song-release-in-shivamogga/